ಪಾಠದ ಜತೆಗೆ ಆಟದ ಹವ್ಯಾಸ ಬೆಳೆಸಿಕೊಳ್ಳಿ

2BK1
Published on

ಬಸವಲ್ಯಾಣ: ಪಾಠದ ಜತೆಗೂ ಆಟವೂ ಅವಶ್ಯವಾಗಿದ್ದು, ಶಾರೀರಿಕ ಮತ್ತು ಮಾನಸಿಕ ಸದೃಢತೆಗಾಗಿ ನಿತ್ಯ ಆಟ ಆಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಶಾಸಕ ಶರಣು ಸಲಗರ ಸಲಹೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ, ಬಸವಕಲ್ಯಾಣ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಬಸವಕಲ್ಯಾಣ ಎಜ್ಯುಕೇಷನಲ್ ಟ್ರಸ್ಟ್ (ಬಿಇಟಿ) ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಸಾಧನೆಗೆ ಶ್ರಮ ಮತ್ತು ಸಂಕಲ್ಪ ಮುಖ್ಯ. ಶಿಕ್ಷಣಕ್ಕೆ ಅವಶ್ಯ ಎಲ್ಲ ಸೌಲಭ್ಯ ಮತ್ತು ಅವಕಾಶ ಇವೆ. ಇದನ್ನು ಸಮರ್ಪಕವಾಗಿ ಬಳಸಿ, ಸಾಧನೆಗೆ ಸಂಕಲ್ಪ ಮಾಡಬೇಕು ಎಂದರು.
ಬಸವಕಲ್ಯಾಣ ಇಂಜಿನಿಯರಿAಗ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಮಹೇಶಕುಮಾರ ಎಂ.ತಾಳಂಪಳ್ಳಿ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವುದೇ ಬಿಇಟಿ ಸಂಸ್ಥೆ ಮೂಲ ಆಶಯ. ಶಿಕ್ಷಣದ ಜತೆಗೆ ಕ್ರೀಡೆಗೆ ಅವಶ್ಯ ಸೌಲಭ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳು ರಾಜ್ಯ- ರಾಷ್ಟçಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ, ಕೀರ್ತಿ ತರಬೇಕು ಎಂದರು.
ಇAಜಿನಿಯರಿAಗ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ, ಪ್ರಾಚಾರ್ಯರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಅಕ್ಕಣ್ಣ, ರಾಜ್ಯ ಕಾರ್ಯದರ್ಶಿ ನರಸಿಂಗರಡ್ಡಿ ಗದಲೇಗಾಂವ, ಪುಣ್ಯಕೋಟಿ ಕಾಲೇಜಿನ ಸೂರ್ಯಕಾಂತ ಶೀಲವಂತ, ತಾಲೂಕು ದೈಹಿಕ ಶಿಕ್ಷಣ ನಿರೀಕ್ಷಕ ಬಸವರಾಜ ಪಾಟೀಲ್, ನರಸಿಂಗರೆಡ್ಡಿ, ಸೂರ್ಯಕಾಂತ ಶೀಲವಂತ, ಇಂಜಿನಿಯರಿAಗ್ ಕಾಲೇಜ ರಜಿಸ್ಟರ್ ಪ್ರೇಮಸಾಗರ ಪಾಟೀಲ್, ಬಿ.ಇಡಿ ಕಾಲೇಜಿನ ಪ್ರಾಚಾರ್ಯೆ ಡಾ.ದಿವ್ಯಾ, ಪಾಲಿಟೆಕ್ನಿಕ್ ಪ್ರಾಚಾರ್ಯ ರಮೇಶ ಭೋಸ್ಲೆ, ಪದವಿ ಕಾಲೇಜಿನ ಪ್ರಾಚಾರ್ಯ ಡಾ.ದಿನೇಶ ಗಣೂರೆ ಇತರರಿದ್ದರು.
ಪಿಯು ಕಾಲೇಜು ಪ್ರಾಚಾರ್ಯ ಪ್ರಶಾಂತ ರಾಜೋಳೆ ಸ್ವಾಗತಿಸಿದರು. ಶಿವಕುಮಾರ ಹಿರೇಮಠ ವಂದಿಸಿದರು. ಉಪನ್ಯಾಸಕ ವಿದ್ಯಾಸಾಗರ ಮೂಲಗೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net