ತಾಲೂಕುಮಟ್ಟ ಪ್ರಾಥಮಿಕ ವಿಭಾಗದ ಕಬಡ್ಡಿ

PTR_4 SEP_1
Published on


ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಽಕಾರಿಯವರ ಕಚೇರಿ ಬಂಟ್ವಾಳ, ಸರ್ಕಾರಿ ಪ್ರೌಢ ಶಾಲೆಯ ಆಶ್ರಯದಲ್ಲಿ ತಾಲೂಕುಮಟ್ಟದ ಪ್ರಾಥಮಿಕ ವಿಭಾಗ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾಟ ೨೦೨೪-೨೫ ವಿಟ್ಲದಲ್ಲಿ ಬುಧವಾರ ನಡೆಯಿತು.


ಉದ್ಯಮಿ ಸುಭಾಶ್ಚಂದ್ರ ನಾಯಕ್ ಉದ್ಘಾಟಿಸಿದರು. ರಾಷ್ಟ್ರಮಟ್ಟದ ಕಬಡ್ಡಿ ಸಾಧಕಿಯರಾದ ಸೌಜನ್ಯ, ಅನುಶ್ರೀ, ಕೀರ್ತಿ ಹಾಗೂ ಕ್ರೀಡಾ ಪ್ರತಿಭೆಗಳಾದ ದಿಲೀಪ್, ಕೌಶಿಕ್ ಅವರನ್ನು ಸನ್ಮಾನಿಸಲಾಯಿತು. ಎನ್‌ಎಂಎಂಎಸ್ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸದಸ್ಯರಾದ ರವಿಪ್ರಕಾಶ್, ಸುನಿತಾ ಕೊಟ್ಯಾನ್, ಗೋವಿಕೃಷ್ಣ, ಉದ್ಯಮಿಗಳಾದ ಬಾಬು ಕೆ. ವಿ., ಮಹಮ್ಮದ್ ರಫಿಕ್, ಬಂಟ್ವಾಳ ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ರಮಾನಾಥ ವಿಟ್ಲ, ತುಳಸೀದಾಸ್ ಶೆಣೈ, ರಾಜಶೇಖರ ವಿಟ್ಲ, ಶಿವಪ್ರಸಾದ್ ಶೆಟ್ಟಿ, ರಾಜೇಂದ್ರ ರೈ, ಸುರೇಶ್ ಶೆಟ್ಟಿ, ಅಖಿಲ್ ಶೆಟ್ಟಿ, ಪ್ರಾಥಮಿಕ ಹಾಗೂ ಪ್ರೌಢ ಶಾಲಾಭಿವೃದ್ಧಿ ಸಮಿಯ ಅಧ್ಯಕ್ಷರಾದ ರವಿಶಂಕರ, ರಶ್ಮಿ, ಸದಾಶಿವ ನಾಯಕ್, ಬಿಂದು, ಮಂಜುನಾಥ, ಇಂದುಶೇಖರ ರೈ ಉಪಸ್ಥಿತರಿದ್ದರು.


ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವಾಗತಿಸಿದರು. ಬಂಟ್ವಾಳ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಪ್ರಸಾದ್ ರೈ ಪ್ರಸ್ತಾವನೆಗೈದರು. ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ವಂದಿಸಿದರು. ಶಿಕ್ಷಕಿ ಅರುಣಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net