ಧಾರ್ಮಿಕ ಕಾರ್ಯಗಳಿಗೆ ಸರ್ಕಾರ ಉತ್ತೇಜನ - ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ - ತಾಲೂಕಾಡಳಿತದಿಂದ ಶ್ರೀಕೃಷ್ಣಾಷ್ಟಮಿ

PTR_26 AUG_1
Published on


ಪುತ್ತೂರು: ಜಯಂತಿ ಆಚರಣೆ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಸರ್ಕಾರ ಧಾರ್ಮಿಕ ಕಾರ್ಯಗಳಿಗೆ ಉತ್ತೇಜನ ನೀಡುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯ ಮೂಲಕ ವಿಶೇಷ ದಿನಗಳಲ್ಲಿ ಪೂಜೆಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸರ್ಕಾರಿ ಕೆಲಸಗಳಿಗೆ ಜನರನ್ನು ಕಾಯಿಸದೆ ಸ್ಪಂದಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ತಾಲೂಕು ಕಚೇರಿ ಸಭಾಂಗಣದಲ್ಲಿ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಪುತ್ತೂರು ತಾಲೂಕು ಗೊಲ್ಲ(ಯಾದವ) ಸಂಘ ಮತ್ತು ಯಾದವ ಸಭಾ ತಾಲೂಕು ಸಮಿತಿ ಆಶ್ರಯದಲ್ಲಿ ನಡೆದ ಶ್ರೀ ಕೃಷ್ಣಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ನಿವೃತ್ತ ಅಂಚೆ ಅಽಕಾರಿ ಈಶ್ವರ್ ಭಟ್ ಗುಂಡ್ಯಡ್ಕ ಉಪನ್ಯಾಸ ನೀಡಿದರು. ಪುತ್ತೂರು ವಲಯ ಗೊಲ್ಲ(ಯಾದವ) ಸಂಘದ ಅಧ್ಯಕ್ಷ ಇ. ಎಸ್. ವಾಸುದೇವ, ಯಾದವ ಸಭಾ ತಾಲೂಕು ಸಮಿತಿಯ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ತಹಸೀಲ್ದಾರ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್.ಆರ್., ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿದ್ದರು.


ತಾಲೂಕು ಕಚೇರಿಯ ದಯಾನಂದ ಸ್ವಾಗತಿಸಿ, ವಂದಿಸಿದರು. ಉಪತಹಸೀಲ್ದಾರ್ ಸುಲೋಚನಾ ಪಿ. ಕೆ. ಕಾರ್ಯಕ್ರಮ ನಿರೂಪಿಸಿದರು.


ಜನ್ಮ ನೀಡಿದ ತಂದೆ ತಾಯಿ ಮೊದಲ ದೇವರಾಗಿದ್ದು, ಅವರ ಆಶೀರ್ವಾದ ಸಿಕ್ಕಾಗ ಭಗವಂತನ ಅನುಗ್ರಹ ಸಿಗುತ್ತದೆ. ದೇವರನ್ನು ಭಕ್ತಿಯಿಂದ ನಂಬಿದಾಗ ಕೈಹಿಡಿದು ನಡೆಸುತ್ತಾನೆ .
| ಅಶೋಕ್ ಕುಮಾರ್ ರೈ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net