

ಮಂಡ್ಯ: ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಅವರು ಶಾಸಕ ರವಿಕುಮಾರ್ ಗಣಿಗ ವಿರುದ್ಧ ಕೀಳುಮಟ್ಟದ ಪದಗಳನ್ನು ಬಳಸಿ ಕ್ಷೇತ್ರದ ಮತದಾರರ ದಿಕ್ಕುತಪ್ಪಿಸುವ ಮಾಡುತ್ತಿದ್ದಾರೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಸುನೀಲ್‌ಕುಮಾರ್ ಆರೋಪಿಸಿದರು.
ಸುಖಾಸುಮ್ಮನೆ ಶಾಸಕರ ವಿರುದ್ಧ ಹಾಗೂ ಅವರ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿರುವುದು ಸರಿಯಿಲ್ಲ. ಎಚ್‌ಡಿಡಿ, ಎಚ್‌ಡಿಕೆ ಕೊಡುಗೆ ಹೊರತುಪಡಿಸಿ ಮಂಡ್ಯಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ಕೊಡುಗೆ ಏನೆಂಬುದನ್ನು ತಿಳಿಸಬೇಕು. ಕ್ಷೇತ್ರದ ಶಾಸಕರು ನಿರಂತರವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರಸಭೆ ಮಾಜಿ ಸದಸ್ಯ ಮಂಜು, ಪ್ರದೀಪ್, ಮನು, ಚಂದನ್, ಚೇತನ್, ನಿತಿನ್ ಇದ್ದರು.