ಅ.26 ರಂದು ತಾಲೂಕ ಘಟಕಗಳ ಉದ್ಘಾಟನೆ

nagaraja
nagaraja
Published on

ರಾಯಚೂರು ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅ.26 ರಂದು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂನ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ತಾಲೂಕ ಘಟಕಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸೇವಾ ಸಮಾಜಂನ ಜಿಲ್ಲಾಧ್ಯಕ್ಷ ನಾಗರಾಜ ರಾಜಲಬಂಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2008 ರಲ್ಲಿ ಸುಕುಮಾರ ನಂಬಿಯಾರ್ ಹಾಗೂ ರಾಜಶೇಖರನ್ ಎಂಬುವರು ಸಂಸ್ಥೆಯನ್ನು ಹುಟ್ಟುಹಾಕಿದ್ದು, ವೀರ ರಮಣರಾಜು ಅಧ್ಯಕ್ಷತೆಯಲ್ಲಿ ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಸಂಸ್ಥೆಯ ಕಾರ್ಯನಿರ್ವಹಿಸುತ್ತಿದೆ.

2014ರಲ್ಲಿ ಚಲನಚಿತ್ರ ನಟ ಶಿವರಾಮ ್ಲ ರಾಜ್ಯ ಘಟಕವನ್ನು ತುಮಕೂರಿನಲ್ಲಿ ಪ್ರಾರಂಭಿಸಿದರು. ಸಂಸ್ಥೆಯಿಂದ ಅನ್ನದಾನ, ಆರೋಗ್ಯ, ದೇವಸ್ಥಾನ ಸ್ವಚ್ಚತೆ ಹಾಗೂ ಪಂಪಾನದಿ ಸ್ವಚ್ಚತೆ ಮೂಲ ಆಶಯದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪ್ರತಿ ತಿಂಗಳು ಉತ್ತರ ನಕ್ಷತ್ರ ಕಾಣುವದಿನದಿಂದ ಪಡಿಪೂಜೆ, ಪ್ರಸಾದ ಸೇವೆ, ಅಯ್ಯಪ್ಪ ಧರ್ಮ ಪ್ರಚಾರ ಕಾರ್ಯಗಳನ್ನು ನಡೆಸಲಾಗುತ್ತದೆ.

ಶಬರಿ ಮಲೈಗೆ ಆಗಮಿಸುವಭಕ್ತರಿಗೆ ಉಚಿತ ನೀರು, ಅನ್ನದಾನ, ತುರ್ತು ಚಿಕಿತ್ಸಾ ವ್ಯವಸ್ಥೆ, ವಾಹನಗಳ ದುರಸ್ತಿಯನ್ನು ಒದಗಿಸಲಾಗುತ್ತಿದೆ. ಅಯ್ಯಪ್ಪ ಭಕ್ತರು ಸ್ವಯಂಪ್ರೇರಿತರಾಗಿ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ವೀರೇಶ ಕುಮಾರ, ಪಿ.ಯಲ್ಲಪ್ಪ, ಪುಂಡ್ಲ ರಾಜೇಂದ್ರರೆಡ್ಡಿ, ಗುಂಜಳ್ಳಿ ಸುರೇಶ, ಗೋವಿಂದ,ಪ್ರಶಾಂತಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net