

ತಾವರಗೇರಾ: ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾವರಗೇರಾದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಕಬಡ್ಡಿ ಮತ್ತು ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:http://ತಾಲೂಕು ಮಟ್ಟಕ್ಕೆ ಆಯ್ಕೆ
ವೈಯಕ್ತಿಕ ಆಟಗಳಾದ ಎತ್ತರ ಜಿಗಿತದಲ್ಲಿ ಲಕ್ಷ್ಮೀ, 100 ಮೀ. ಓಟದಲ್ಲಿ ಹುಲಿಗೆಮ್ಮ, 200 ಮೀ. ಓಟದಲ್ಲಿ ವಿಜಯಲಕ್ಷ್ಮೀ, 400 ಮೀ. ಓಟದಲ್ಲಿ ಪೂರ್ಣಿಮಾ, ಬರ್ಚಿ ಎಸೆತದಲ್ಲಿ ಚಂದ್ರಕಲಾ ಪ್ರಥಮರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದಲ್ಲದೆ ಥ್ರೋಬಾಲ್ ಮತ್ತು ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.