ತಾಲೂಕು ಕ್ರೀಡಾಂಗಣದ ಸೌಲಭ್ಯ ಲಭಿಸಲಿ

Oplus_131072
Oplus_131072
Published on

ರಾಮದುರ್ಗ : ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳಿದ್ದು, ಅವರ ಪ್ರೋತ್ಸಾಹಕ್ಕೆ ತಾಲೂಕಿನಲ್ಲಿ ಬಹತ್​ ಕ್ರೀಡಾಂಗಣದ ಅಗತ್ಯವಿದ್ದು, ಜನಪ್ರತಿನಿಧಿಗಳು ಗಮನಹರಿಸಬೇಕೆಂದು ವಿಶ್ವಭಾರತಿ ಶಿಣ ಸಂಸ್ಥೆಯ ಕಾರ್ಯದರ್ಶಿ ಹನುಮಂತ ಮಾದರ ಮನವಿ ಮಾಡಿದರು.

ತಾಲೂಕಿನ ಚಂದರಗಿ ಕ್ರೀಡಾಶಾಲೆಯಲ್ಲಿ ವಿಶ್ವಭಾರತಿ ಪದವಿಪೂರ್ವ ಮಹಾವಿದ್ಯಾಲಯದ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ತಾಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಪಡೆದುಕೊಂಡರೆ ಸರ್ಕಾರಿ ಉದ್ಯೋಗದಲ್ಲಿ ಶೇ. 3ರಷ್ಟು ಮೀಸಲಾತಿ ಇದೆ. ಕ್ರೀಡಾಪಟುಗಳು ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆನೀಡಿದರು.

ಸ್ಪೋಕೋ ಸಂಸ್ಥೆಯ ನಿರ್ದೇಶಕ ಶಿವಪ್ಪ ನವರಕ್ಕಿ ಮಾತನಾಡಿ, ಕ್ರೀಡೆಗಳಲ್ಲಿ ಸೋಲು&ಗೆಲುವು ಮುಖ್ಯವಲ್ಲ. ಸೋಲೇ ಗೆಲುವಿನ ಸೋಪಾನ ಎಂದು ತಿಳಿದು ಪ್ರಯತ್ನಿಸಿದರೆ ಖಂಡಿತ ಪ್ರತಿಲ ಲಭಿಸುತ್ತದೆ ಎಂದರು.

ಕಟಕೋಳ ಪಿಎಸ್​ಐ ಬಸವರಾಜ ಕೊಣ್ಣೂರೆ ಮಾತನಾಡಿ, ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಬೇಕು ಎಂದರು. ವಿಶ್ವಭಾರತಿ ಶಿಣ ಸಂಸ್ಥೆಯ ಆಡಳಿತಾಧಿಕಾರಿ ಯಮನಪ್ಪ ಮಾದರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ದೆಹಿಕ ಶಿಕ್ಷಣ ನಿರ್ದೇಶಕ ಎಸ್​.ಎಂ.ಜಲಗೇರಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಸ್ಪೋಕೊ ನಿರ್ದೇಶಕ ಸಂಗಪ್ಪ ಅಡಗಿಮನಿ, ಆರ್​.ವೆ.ನದಾ, ಪಿ.ಡಿ.ಕಾಲವಾಡ, ಎನ್​.ಜಿ.ಭಜಂತ್ರಿ, ಎಂ.ಎಸ್​.ಮೇಟಿ,

ಎಸ್​.ಬಿ.ಪಾಟೀಲ, ಎಚ್​.ಬಿ.ಗೋಣಿ, ಅಶೋಕ ಹೊಸಮನಿ, ಮಲ್ಲಿಕಾರ್ಜುನರಡ್ಡಿ ಗೊಂದಿ,

ಆರ್​.ಬಿ.ಸವಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net