

ಸುಳ್ಯ: ವ್ಯಕ್ತಿಗೆ ಜ್ಞಾನ ನೀಡಿ ಆತನನ್ನು ಸುಂದರಮೂರ್ತಿಯನ್ನಾಗಿ ಮಾಡುವ ಶಿಕ್ಷಕರ ಬಗ್ಗೆ ಗೌರವ, ಪ್ರೀತಿ, ಆದರಗಳನ್ನು ಹೊಂದಿರಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಬೆಳ್ಳಾರೆ ಕೆ.ಪಿ.ಎಸ್.ವಿದ್ಯಾಸಂಸ್ಥೆಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುತ್ತೂರು ಬಪ್ಪಳಿಕೆ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕಮ್ಮಜೆ ದಿಕ್ಸೂಚಿ ಭಾಷಣ ಮಾಡಿದರು. ಸುಳ್ಯ ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್, ಸುಳ್ಯ ತಾಲೂಕು ಕ.ಸಾ.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲು, ಸರ್ಕಾರಿ ನೌಕರರ ಸಂಘ ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್ ಟಿ., ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಶ್ರೀಧರ ಗೌಡ ಕೆ., ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಅಧ್ಯಕ್ಷ ಚಂದ್ರಶೇಖರ ಕೆ.ಎಸ್., ಅಕ್ಷರ ದಾಸೋಹ ಅಧಿಕಾರಿ ವೀಣಾ ಎಂ.ಟಿ., ಅಧಿಕಾರಿಗಳ ಸಂಘ ಕಾರ್ಯದರ್ಶಿ ಪ್ರಕಾಶ ಮೂಡಿತ್ತಾಯ, ಚಿತ್ರಕಲಾ ಶಿಕ್ಷಕರ ಸಂಘ ಅಧ್ಯಕ್ಷ ಮೋಹನ್, ಜಿಪಿಟಿ ಅಧ್ಯಕ್ಷ ಸುನೀಲ್ ಕುಮಾರ್, ಪದವೀಧರ ಶಿಕ್ಷಕರ ಸಂಘ ಅಧ್ಯಕ್ಷ ದೇವರಾಜ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ಧನಂಜಯ, ಸೂಫಿ ಪೆರಾಜೆ, ಸರ್ಕಾರಿ ನೌಕರರ ಸಂಘ ಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ, ಬೆಳ್ಳಾರೆ ಕೆ.ಪಿ.ಎಸ್.ಪ್ರಾಂಶುಪಾಲ ಜನಾರ್ದನ, ಉಪಪ್ರಾಂಶುಪಾಲೆ ಉಮಾ ಕುಮಾರಿ, ಮುಖ್ಯಶಿಕ್ಷಕ ಮಾಯಿಲಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಇದ್ದರು.
ಶಿಕ್ಷಕಿ ಜಯಶೀಲಾ ಪ್ರಾರ್ಥಿಸಿದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ.ಸ್ವಾಗತಿಸಿ. ಪೂರ್ಣಿಮಾ ಮಡಪ್ಪಾಡಿ, ಉಷಾ, ವಿಜಯಾ ಹಾಗೂ ದೇವಿಪ್ರಸಾದ್ ನಾಡಗೀತೆ, ರೈತ ಗೀತೆ ಹಾಡಿದರು. ಶಿಕ್ಷಕರುಗಳಾದ ದಿನೇಶ್ ಮಾಚಾರ್, ಶ್ರೀಪ್ರಿಯಾ, ಮಮತಾ ಜಯನಗರ, ಆಶಾ ಅಂಬೆಕಲ್ಲು ನಿರೂಪಿಸಿದರು.
ಮೊಬೈಲ್ ಕಾಲದಲ್ಲಿ ಮಕ್ಕಳು ಓದುವುದನ್ನು ಮರೆಯುತ್ತಿದ್ದಾರೆ. ಮಕ್ಕಳು ಪುಸ್ತಕ ಹಾಗೂ ಪತ್ರಿಕೆ ಓದುವಂತೆ ಶಿಕ್ಷಕರು ಮಾಡಬೇಕು. - ಸದಾನಂದ ಮಾವಜಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ https://www.vijayavani.net/pothole-on-kumardhara-highway https://www.vijayavani.net/mls-manjunath-bhandary