ಬಾಣಾವರದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ

01-ASK- 14
ಅರಸೀಕೆರೆ ತಾಲೂಕಿನ ಬಾಣಾವರದ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಉದ್ಘಾಟಿಸಿದರು. ದೊರೇಶ್, ವಾಸುದೇವ್, ಕುಮಾರ್, ಕಲ್ಯಾಣ್ ಕುಮಾರ್, ಶಂಕರ್, ಸದಾನಂದಮೂರ್ತಿ, ನಟರಾಜ್, ನಾರಾಯಣ್, ಬಸವರಾಜು, ಗಂಗಾಧರ ಸ್ವಾಮಿ, ಯೋಗೇಶ್, ಧನಂಜಯ್ ಇದ್ದರು.
Published on

 ಅರಸೀಕೆರೆ (ಗ್ರಾಮಾಂತರ): ಮಕ್ಕಳ ಪಠ್ಯಪುಸ್ತಕದ ಬೋಧನೆ ನಡುವೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಗುರುತಿಸುವುದರಲ್ಲಿ ಈ ಪ್ರತಿಭಾ ಕಾರಂಜಿ ಸಾಕ್ಷಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಬಾಣಾವರದ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಪ್ರತಿಭೆಯನ್ನು ಪುರಸ್ಕರಿಸಲು ಇಂತಹ ಚಟುವಟಿಕೆಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಶ್ರೀನಿವಾಸ ಮಾತನಾಡಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ವಿಶ್ವನಾಥ್ ಮಾತನಾಡಿ, ತಾಲೂಕು ಮಟ್ಟದ ಈ ಪ್ರತಿಭಾ ಕಾರಂಜಿ ನಮ್ಮ ಹೋಬಳಿ ಮಟ್ಟದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ. ಮಕ್ಕಳು ಇಂತಹ ವೇದಿಕೆಗಳನ್ನು ಉಪಯೋಗಿಸಿಕೊಂಡು ಎತ್ತರಕ್ಕೆ ತಮ್ಮ ಪ್ರತಿಭೆ ಬೆಳಗಲಿ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ.ಕೆ.ದೊರೇಶ್, ವಾಸುದೇವ್, ಕುಮಾರ್, ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್, ಸಹಾಯಕ ನಿರ್ದೇಶಕರಾದ ಯೋಗೀಶ್, ಗಂಗಾಧರಸ್ವಾಮಿ, ಧನಂಜಯ, ಚಂದ್ರಪ್ಪ, ಕಲ್ಯಾಣ್‌ಕುಮಾರ್, ನಟರಾಜ್ ಸದಾನಂದಮೂರ್ತಿ, ತಾಂಡವಮೂರ್ತಿ, ಬಸವರಾಜು, ಶಿಕ್ಷಕರಾದ ನಾರಾಯಣ್ ರಾವ್, ಸುಮಾ ಸಿದ್ದೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net