

ಎನ್.ಆರ್.ಪುರ: ತಾಲೂಕಿನ 6 ಕ್ಲಸ್ಟರ್‌ಗಳ ಪ್ರತಿಭಾ ಕಾರಂಜಿ ಹಾಗೂ ಗುಬ್ಬಿಗಾ ಗ್ರಾಪಂನಲ್ಲಿ 2 ವಲಯ ಮಟ್ಟದ ಪ್ರತಿಭಾ ಕಾರಂಜಿ ಮುಕ್ತಾಯವಾಗಿದ್ದು, ಬಾಳೆಹೊನ್ನೂರಿನಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮೆಚ್ಚುಗೆ ವ್ಯಕ್ತಪಡಿಸಿದರು.
ಈಚಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಆರ್.ಪುರ ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುಬ್ಬಿಗಾ ಗ್ರಾಪಂ ಅಧ್ಯಕ್ಷೆ ನಾಗರತ್ನ ಮಾತನಾಡಿ,ಮಕ್ಕಳ ಪ್ರತಿಭಾ ಅನಾವರಣಗೊಳ್ಳಲು ಇದೊಂದು ಉತ್ತಮ ಅವಕಾಶ. ಮಕ್ಕಳು ಈ ವೇದಿಕೆ ಉಪಯೋಗಿಸಿಕೊಂಡು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ಹಾಕಬೇಕು. ಈ ಪ್ರತಿಭಾ ಕಾರಂಜಿಗೆ ಅನೇಕ ದಾನಿಗಳು ಕೈ ಜೋಡಿಸಿದ್ದಾರೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ರಮಾಕಾಂತ, ಉಪಾಧ್ಯಕ್ಷೆ ಪ್ರಶೀಲ,ಗುಬ್ಬಿಗಾ ಗ್ರಾಪಂ ಸದಸ್ಯರಾದ ಉಮಾದೇವಿ, ವಸಂತ ಕೋಟ್ಯಾನ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ, ತಾಲೂಕು ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್, ಶಿಕ್ಷಣ ಸಂಯೋಜಕರಾದ ರಂಗಪ್ಪ, ಸಂಗೀತ, ಸಿಆರ್‌ಪಿ ಅನಂತಪ್ಪ, ಮುಖ್ಯಶಿಕ್ಷಕಿ ವೀಣಾ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸೇವ್ಯಾನಾಯಕ್, ಬಿ.ಟಿ.ಪ್ರಕಾಶ,ಬೋಗೇಶಪ್ಪ, ರಾಜಾನಾಯ್ಕ ,ನಂಜುಂಡಪ್ಪ ಇದ್ದರು.