10ರಿಂದ ತಾಲೂಕುಮಟ್ಟದ ಕ್ರೀಡಾಕೂಟ

Taluk-level sports meet from 10th
ರಾವ ಅಣ್ಣಿಗೇರಿ, ಅಧ್ಯಕ್ಷ, ಸ್ವಾಮಿ ವಿವೇಕಾನಂದ ಸೇನೆ
Published on

ವಿಜಯಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 2024&25 ನೇ ಸಾಲಿನ ವಿಶೇಷ ಚೇತನರ ತಾಲೂಕುಮಟ್ಟದ ಕ್ರೀಡಾಕೂಟವು ಡಿ. 10 ಮತ್ತು ಡಿ. 11 ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆಯಲಿವೆ.

ಡಿ. 10 ರಂದು ವಿಜಯಪುರ ತಾಲೂಕಿನ ಕ್ರೀಡಾಕೂಟವನ್ನು ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ, ಇಂಡಿ ತಾಲೂಕಿನ ಕ್ರೀಡಾಕೂಟವನ್ನು ಇಂಡಿ ತಾಲೂಕಾ ಕ್ರೀಡಾಂಗಣದಲ್ಲಿ, ಸಿಂದಗಿ ತಾಲೂಕಾ ಕ್ರೀಡಾಕೂಟ ಸಿಂದಗಿ ತಾಲೂಕಾ ಕ್ರಿಡಾಂಗಣದಲ್ಲಿ, ಹಾಗೂ ಬಸವನಬಾಗೇವಾಡಿ ತಾಲೂಕಿನ ಕ್ರೀಡಾಕೂಟ ಬಾಗೇವಾಡಿಯ ಎಸ್​ಬಿ ಪಿಯು ಕಾಲೇಜಿನಲ್ಲಿ ಮತ್ತು ಡಿಸೆಂಬರ್​ 11ರಂದು ಮುದ್ದೇಬಿಹಾಳ ತಾಲೂಕಿನ ಕ್ರೀಡಾಕೂಟವನ್ನು ಮುದ್ದೇಬಿಹಾಳದ ವಿಬಿಸಿ ಮೈದಾನದಲ್ಲಿ ಆಯೋಜಿಸಲಾಗಿದೆ.\

ಕ್ರೀಡಾಕೂಟಗಳಿಗೆ ವಿಜಯಪುರ ತಾಲೂಕಿಗೆ ಸಂಬಂಧಿಸಿದಂತೆ ರಾಜಶೇಖರ ದೈವಾಡಿ ಮೊ. 7019008443, ಇಂಡಿ : ಎಚ್​.ಕೆ. ಮಳಗೊಂಡ ಮೊ. 9632315492, ಸಿಂದಗಿ : ಎನ್​.ಆರ್​. ಚವಾಣ ಮೊ. 9480678097, ಬಸವನಬಾಗೇವಾಡಿ : ಎಸ್​.ಎಸ್​. ಅವಟಿ ಮೊ. 9663297654 ಹಾಗೂ ಮುದ್ದೇಬಿಹಾಳ : ಬಿ.ವೈ. ಕವಡಿ ಮೊ. 7026369805 ಅವರನ್ನು ನೇಮಿಸಲಾಗಿದೆ.

ಕ್ರೀಡಾಕೂಟದಲ್ಲಿ 18 ವರ್ಷ ವಯೋಮಿತಿ ಮೇಲ್ಪಟ್ಟ ಪುರುಷ, ಮಹಿಳೆಯರಿಗೆ 100 ಮೀ. ಓಟ, ಗುಂಡು ಎಸೆತ, ಬಕೆಟಿನಲ್ಲಿ ರಿಂಗ್​ ಹಾಕುವುದು. 6 ರಿಂದ 17 ವರ್ಷದವರಿಗೆ 100 ಮೀ ಓಟ, ಗುಂಡು ಎಸೆತ, ಥ್ರೋಬಾಲ್​ ಎಸೆತ, 18 ವರ್ಷದೊಳಗಿನ ಹಾಗೂ ಮೇಲ್ಪಟ್ಟ ವಯೋಮಿತಿಯ ದೃಷ್ಟಿದೋಷ ವಿಶೇಷಚೇತನರಿಗೆ 50 ಮೀ. ನಡಿಗೆ, ಗುಂಡು ಎಸೆತ, ಮೂಜಿಕಲ್​ ಚೇರ್​ ಹಾಗೂ 18 ವರ್ಷದೊಳಗಿನ ಹಾಗೂ ಮೇಲ್ಪಟ್ಟ ವಯೋಮಿತಿಯ ಶ್ರವಣದೋಷ ವಿಶೇಷಚೇತನರಿಗೆ 100 ಮೀ. ಓಟ, ಗುಂಡು ಎಸೆತ, ಉದ್ದ ಜಿಗಿತ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಆಯಾ ತಾಲೂಕಿನ ಸ್ಪರ್ಧಿಗಳು ಅಂದು ಬೆಳಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳಬೇಕು.

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರು ಡಿ. 17 ರಂದು ವಿಜಯಪುರ ನಗರದ ಡಾ. ಬಿ.ಆರ್​. ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ವಿಶೇಷ ಚೇತನ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ 08352&251085 ಮತ್ತು ಮೊ. 8792185141 ಕ್ಕೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net