ಆರ್ಥಿಕ ಸೌಲಭ್ಯ ಪಡೆಯಲು ಸಂಘಟಿತರಾಗಿ

11 HANUR 3
ಹನೂರಿನಲ್ಲಿ ಆಯೋಜಿಸಿದ್ಧ ನಿವೃತ್ತ ಸರ್ಕಾರಿ ನೌಕರರ ತಾಲೂಕು ಮಟ್ಟದ ಸಭೆಯಲ್ಲಿ ಜಿಲ್ಲಾ ಸಂಚಾಲಕ ರುದ್ರಯ್ಯ ಮಾತನಾಡಿದರು. ಮಹದೇವಯ್ಯ, ಅಮಲದಾಸ್, ಶಿವಣ್ಣ, ಸಿದ್ದಪ್ಪ ಇತರರು ಇದ್ದರು.
Published on

ಹನೂರು: ಏಳನೇ ವೇತನ ಆಯೋಗದ ವರದಿ ಅನ್ವಯ ಪರಿಷ್ಕೃತ ವೇತನದ ಆರ್ಥಿಕ ಸೌಲಭ್ಯ ಪಡೆಯಲು ಪ್ರತಿಯೊಬ್ಬರೂ ಸಂಘಟಿತರಾಗಬೇಕಿದೆ ಎಂದು ನಿವೃತ್ತ ನೌಕರರ ಸಂಘದ ಜಿಲ್ಲಾ ಸಂಚಾಲಕ ರುದ್ರಯ್ಯ ಕರೆ ನೀಡಿದರು.

ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಮಂಗಳವಾರ ಸರ್ಕಾರದಿಂದ ಆರ್ಥಿಕ ಸೌಕರ್ಯ ಪಡೆಯುವ ಸಂಬಂಧ ಆಯೋಜಿಸಿದ್ದ ನಿವೃತ್ತ ಸರ್ಕಾರಿ ನೌಕರರ ತಾಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದರು.

2022ರ ಜು.1ರಿಂದ 2024ರ ಜು.31ರ ಅವಧಿಯಲ್ಲಿ ನಿವೃತ್ತಿಯಾದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತಿ ಉಪಲಬ್ದವನ್ನು ಪಾವತಿಸುವ ವೇಳೆ ಆರ್ಥಿಕ ನಷ್ಟವಾಗಿ ಅನ್ಯಾಯವಾಗಿದೆ. ಆಯೋಗದ ವರದಿಯಂತೆ ಪರಿಷ್ಕೃತ ವೇತನದ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ, ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣ ಸೌಲಭ್ಯದ ಲೆಕ್ಕಾಚಾರದ ವ್ಯತ್ಯಾಸದ ಹಣವನ್ನು ನೀಡಬೇಕು. ಈ ಸಂಬಂಧ ತಾಲೂಕು ಕೇಂದ್ರಗಳಲ್ಲಿ ಈಗಾಗಲೇ ಪ್ರತಿಭಟನೆ ನಡೆಸಲಾಗಿದ್ದು, ಇದರ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಫೆ.28 ರಂದು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ತಾಲೂಕಿನಿಂದ ಹೆಚ್ಚಿನ ನೌಕರರು ಆಗಮಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನೌಕರ ಸಂಘದ ಜಿಲ್ಲಾ ಸಂಚಾಲಕರಾದ ಮಹದೇವಯ್ಯ, ಶಿವಣ್ಣ, ಗುಂಡ್ಲುಪೇಟೆಯ ಶಿವಸ್ವಾಮಿ, ಹನೂರಿನ ಅಮಲದಾಸ್, ಸಿದ್ದಪ್ಪ, ನೌಕರರಾದ ಮಾರಿಮುತ್ತು, ಮ್ಯಾಕ್ಸಿಂ ಗೋವಿಯಸ್, ಪ್ರಭುಸ್ವಾಮಿ, ನಟೇಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net