ಬೆಳಾಲಿನಲ್ಲಿ ತಾಲೂಕುಮಟ್ಟದ ಕರಾಟೆ ಸ್ಪರ್ಧೆ

New Project (3)
Published on

ಬೆಳ್ತಂಗಡಿ: ಬೆಳಾಲು ಶ್ರೀ ಧ.ಮಂ.ಪ್ರೌಢಶಾಲೆಯಲ್ಲಿ ತಾಲೂಕುಮಟ್ಟದ ಕರಾಟೆ ಸ್ಪರ್ಧೆ ಮಂಗಳವಾರ ನಡೆಯಿತು.

ಗಿರೀಶ್ ಬಾರಿತ್ತಾಯ ಪಾರಳ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಂಯೋಜಕ ಎಸ್.ಎನ್.ಕಾಕತ್ಕರ್, ಬೆಳಾಲು ಗ್ರಾಪಂ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅಖಿಲ್ ಕುಮಾರ್, ಇಂಡಿಯನ್ ಕರಾಟೆ ಅಸೋಸಿಯೇಷನ್ ತೀರ್ಪುಗಾರ ಅಶೋಕ್ ಆಚಾರ್ಯ, ಬೆಳಾಲು ಪ್ರೌಢಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಕುರ್ಕಿಲ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ್ ಉಪಸ್ಥಿತರಿದ್ದರು.

ಕರಾಟೆ ಸ್ಪರ್ಧೆಯ 52 ಕೆ.ಜಿ. ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿನಿ ಜಾಹ್ನವಿ ಪ್ರಥಮ ಸ್ಥಾನ ಗಳಿಸಿ ದ.ಕ. ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಶ್ರೀಕೃಷ್ಣಾನಂದ ರಾವ್ ಕ್ರೀಡಾಕೂಟ ಸಂಘಟಿಸಿದ್ದರು. ಮುಖ್ಯಶಿಕ್ಷಕ ಜಯರಾಮ ಮಯ್ಯ ಸ್ವಾಗತಿಸಿದರು. ಶಿಕ್ಷಕರಾದ ಕಿರಣ್ ವಂದಿಸಿದರು. ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net