ತಾಲೂಕು ಮಟ್ಟದಲ್ಲಿ ಬಾಲಕಿಯರ ಸಾಧನೆ

ಹನುಮಸಾಗರ 1
ಹನುಮಸಾಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಕ್ಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ರಾಯಮ್ಮ ಉಕ್ಕಲಿ, ದೈಹಿಕ ಶಿಕ್ಷಕ ಶಿವಪ್ಪ ಕಮ್ಮಾರ, ಶಿಕ್ಷಕರಾದ ಅಮರೇಶ್ ತಮ್ಮಣ್ಣನವರ, ಶರಣಪ್ಪ ಗುಳೇದ, ಶಂಕ್ರಪ್ಪ ತಳವಾರ, ಈರಣ್ಣ ಪರಸಾಪುರ, ವಿಜಯ್ ಕುಮಾರ, ಷಣ್ಮುಖಪ್ಪ ಕರಡಿ, ಬೀರಪ್ಪ ಕಡ್ಲಿಮಟ್ಟಿ, ಭಾರತಿ, ಲಕ್ಷ್ಮೀ ದಟ್ಟಿ, ಯಲ್ಲಮ್ಮ, ಸವಿತಾ ಇತರರಿದ್ದರು.
Published on

ಹನುಮಸಾಗರ: ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ತಾಲೂಕಾ ಮಟ್ಟದ ಬ್ಯಾಡ್ಮಿಂಟನ್ ಹಾಗೂ ಶಟಲ್ ಕಾಕ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕುಷ್ಟಗಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಶಟಲ್ ಕಾಕ್ ಸ್ಪರ್ಧೆಯಲ್ಲಿ ಸುಚಿತ್ರ ಕೊಪ್ಪಳ, ನಾಗವೇಣಿ ಹಿರೇಮಠ, ಯಶೋದಾ ಕುದರಿ, ಸೃಷ್ಟಿ ಮಡಿವಾಳ, ಸಂಜನಾ ಪಾಟೀಲ್ ಭಾಗವಹಿಸಿ ವಿಜೇತರಾಗಿದ್ದಾರೆ.

ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಅಭಿನಯ ಮೂಲಿಮನಿ, ಸ್ನೇಹ ಮಾನ್ವಿ, ಸಾನಿಯಾ ಮೆನೇದಾಳ್, ವಿಜಯಲಕ್ಷ್ಮೀ ಗದ್ದಿ, ಸೆಹ್ರಾಬಾನು ಕಟಗಿ, ನಾಜ್ಮೀನ್ ಲೋಕಂಪಲ್ಲಿ, ಸಹನಾ ರಂಗರೇಜ್, ದಾದಬಿ ವಿಜೇತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net