ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ 18ಕ್ಕೆ

Published on

ಮಾನ್ವಿ: ಸ್ವಾತಂತ್ರೃ ದಿನಾಚರಣೆ ನಿಮಿತ್ತ ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆ.18ರಂದು ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ತಾಲೂಕು ಸಮಿತಿ ಅಧ್ಯಕ್ಷ ಪ್ರೀತಮ್ ಕೊಡ್ಲಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ್ ಜೋಡೋ ಭವನದಲ್ಲಿ ಯುವ ಪೀಳಿಗೆಗೆ ತಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ‘ಭಾರತಕ್ಕೆ ಸ್ವಾತಂತ್ರ್ಯ ಮತ್ತು ಸಂವಿಧಾನದ ಮಹತ್ವ’ದ ಶೀರ್ಷಿಕೆಯಡಿ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿದ್ದು, ಆಸಕ್ತ ವಿದ್ಯಾರ್ಥಿಗಳು ಆ.18 ರೊಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರಥಮ ಬಹುಮಾನ 15 ಸಾವಿರ ರೂ. ಹಾಗೂ ದ್ವಿತೀಯ 10 ಸಾವಿರ ನಗದು ಬಹುಮಾನ ನೀಡಲಾಗುವುದು.

ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು. ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಅಥವಾ ಕಾಲೇಜು ಐಡಿ ಕಾರ್ಡ್ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು. ತಾಲೂಕು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರವೀಣ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ. ಇಸ್ಮಾಯಿಲ್ ಮಾಡಗಿರಿ, ಉಪಾಧ್ಯಕ್ಷ ಮುಜ್ಜು ಪಾಟೀಲ್, ಕ್ರಾಂತಿ ಕುಮಾರ್ ಯಾದವ್, ಹಂಪಯ್ಯ ನಾಯಕ್, ಚೇತನ್ ಕುಮಾರ್, ಅಯ್ಯಪ್ಪ ಶಿರವಾಟಿ, ಮೆಹಬೂಬ್ ಪಾಷಾ, ರಮೇಶ, ಯಾಸಿನ್ ಪಾಷಾ, ಆಂಜನೇಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net