

ಕೋಟ: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿ ತಿಳಿಯಲು ಒಂದು ಉತ್ತಮ ಬುನಾದಿ ಹಾಕಿದವ. ತೌಲನಿಕ ಅಧ್ಯಯನದಿಂದ ಸಾಕ್ಷಿ ಅನಾವರಣವಾಗುತ್ತದೆ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಂ ಹೇಳಿದರು.
ಚೇತನ ಪ್ರೌಢಶಾಲೆಯಲ್ಲಿ ಪ್ರಾಚ್ಯ ಪ್ರಜ್ಞೆ ತಾಲೂಕುಮಟ್ಟದ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ., ಮುಖ್ಯ ಶಿಕ್ಷಕಿ ಕಲ್ಪನಾ, ಉದ್ಯಮಿ ವಿಘ್ನೇಶ್ವರ ಅಡಿಗ, ತೀರ್ಪುಗಾರರಾದ ಸುಹೈಲ್ ಮನೋಹರ್, ನರೇಂದ್ರ ಕುಮಾರ್ ಕೋಟ, ಜ್ಯೋತಿ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು. ಶಿಕ್ಷಕ ಪಲೀರಪ್ಪ ಕಾರ್ಯಕ್ರಮ ನಿರೂಪಿಸಿದರು.