

ಮಡಿಕೇರಿ:
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ತಾಲೂಕು ಮಟ್ಟದ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ನೀಡಿರುವ ನಾಮ ನಿರ್ದೇಶನದಂತೆ ಈ ಸಮಿತಿಗಳನ್ನು ರಚಿಸಿ ಆದೇಶ ಮಾಡಲಾಗಿದೆ.
ಮಡಿಕೇರಿ ತಾಲೂಕಿಗೆ ಎಂ.ಜಿ. ಮೋಹನ್ ದಾಸ್ ಅಧ್ಯಕ್ಷರಾಗಿದ್ದು, ಮಡಿಕೇರಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಸದಸ್ಯರಾಗಿ ರಘು ಬೆಟಗೇರಿ, ರಂಗಪ್ಪ ಭಾಗಮಂಡಲ, ಮಿಟ್ಟು ಸೋಮಯ್ಯ, ಸಿರಾಜ್ ನಾಪೋಕ್ಲು, ಫ್ಯಾನ್ಸಿ ಪಾರ್ವತಿ, ರಾಜೇಶ್ವರಿ, ರೋಶನ್, ಅರ‌್ಫಾತ್ ನಾಪೋಕ್ಲು, ಪೆರುಮಾಂಡ ಮನು ಪೆರಾಜೆ, ದಯಾನಂದ ಮರಗೋಡು, ಶ್ಯಾಮ ಮಕ್ಕಂದೂರು, ಕೌಶಿಕ್ ಕುಟ್ಟಯ್ಯ ಪಾರಾಣೆ, ಎ. ಇಬ್ರಾಹಿಂ, ಪ್ರಭು ರೈ ನೇಮಕವಾಗಿದ್ದಾರೆ.
ವಿರಾಜಪೇಟೆ ತಾಲೂಕಿಗೆ ಪಿ.ವಿ. ಜಾನ್ಸನ್ ಅಧ್ಯಕ್ಷರಾಗಿದ್ದು, ವಿರಾಜಪೇಟೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಹೆಚ್.ಎಂ. ಮಹಾದೇವ, ಇಂದಿರಾ, ಹರೀಶ್, ಕೆ.ಎ. ನಿಶ್ಚಿತಾ, ಕಾವೇರಮ್ಮ ಕರುಂಬಯ್ಯ, ಮೇಕ್ತಂಡ ರಾಘು, ವಿ.ಕೆ. ಬಷೀರ್, ನಡಿಕೇರಿಯಂಡ ಮಹೇಶ, ಮೂಸ ಎಂ.ಎಚ್., ಅಂಟೋನಿ ಪಿ.ಜೆ., ಗಣೇಶ ಎಂ.ಪಿ., ಎಂ.ವೈ. ಅಲಿ, ಮಚಿತ್ರಾ ಬೋಪಣ್ಣ ಹಾಗೂ ತರುಣ್ ಗೌಡ ಸದಸ್ಯರಾಗಿ ನೇಮಕವಾಗಿದ್ದಾರೆ.
ಪೊನ್ನಂಪೇಟೆ ತಾಲೂಕಿಗೆ ಕಲಿಮಾಡ ಪ್ರಶಾಂತ ಅಧ್ಯಕ್ಷರಾಗಿ ಆಯ್ಕೆ ಆಗಿದ್ದು, ವಿರಾಜಪೇಟೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಸಿದ್ದು ನಾಚಪ್ಪ, ಅಪ್ಪಣ್ಣ, ಬಿ.ಎಸ್. ಅಚ್ಯುತ್ತ, ಲಿಖಿತಾ, ಖಾಲಿದ್, ಮಧುಸೂದನ, ಕೆ.ಟಿ. ಮುತ್ತಣ್ಣ, ಭಾವಿನಿ ಕುಶಾಲಪ್ಪ, ಅನೀಸ್ ಅಹಮ್ಮದ್, ಲಾಲು ಸ್ಟಾಲಿನ್, ಕಾವೇರಪ್ಪ ಕಾಯಪಂಡ, ರಾಮಕೃಷ್ಣ, ಪರ್ಮಾಲೆ ಗಣೇಶ್ ಹಾಗೂ ಫೀಲೋಮಿನಾ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಸೋಮವಾರಪೇಟೆ ತಾಲೂಕಿಗೆ ಅಧ್ಯಕ್ಷರನ್ನಾಗಿ ಜಿ.ಎಂ. ಕಾಂತರಾಜು ನೇಮಕವಾಗಿದ್ದು, ಸೋಮವಾರಪೇಟೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಗೌತಮ್ ಶಿವಪ್ಪ, ಹೆಚ್.ಬಿ. ರಾಜಪ್ಪ, ಬಿ.ಎಂ. ಸುರೇಶ, ಲೀಲಾ ಡಿಸೋಜಾ, ರಾಜಮ್ಮ ರುದ್ರಯ್ಯ, ಎಂ. ಉಮ್ಮರ್, ಎಸ್.ಎಂ. ಡಿಸಿಲ್ವಾ, ಪ್ರೇಮ್‌ಕುಮಾರ್, ಸಂದೀಪ್ ವಿ., ವೀರೇಂದ್ರ ಕುಮಾರ್ ಎಸ್.ಆರ್., ಡಿ.ಪಿ. ಬೋಜಪ್ಪ, ಎಸ್.ಪಿ. ರಾಜು, ರಂಗಸ್ವಾಮಿ ಬಿ.ಟಿ. ಹಾಗೂ ಅಬ್ಬಾಸ್ ಸಿ.ಬಿ. ಸದಸ್ಯರಾಗಿ ನೇಮಕವಾಗಿದ್ದಾರೆ.
ಕುಶಾಲನಗರ ತಾಲೂಕಿಗೆ ವಿ.ಪಿ. ಶಶಿಧರ್ ಅಧ್ಯಕ್ಷರಾಗಿ ನೇಮಕವಾಗಿದ್ದು, ಸೋಮವಾರಪೇಟೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ನಂಜುಂಡ ಸ್ವಾಮಿ, ಶ್ರೀನಿವಾಸ, ಸುಧಾ, ಫಿಲೋಮಿನಾ, ಕಿಶೋರ್ ಯು.ಎಂ., ಎಂ.ಎ. ಆದಂ, ರೋಶನ್ ಆರ್., ಮಲ್ಲಿಕಾರ್ಜುನ, ಪುನೀತಾ, ಕೃಷ್ಣೇಗೌಡ, ರಫೀನ್ ಖಾನ್ ಹೆಚ್.ಯು., ರಾಜಶೇಖರ್, ವಿವೇಕಾನಂದ ಹಾಗೂ ಅಬ್ದುಲ್ ರಜಾಕ್ ಸದಸ್ಯರಾಗಿ ನೇಮಕವಾಗಿದ್ದಾರೆ.