

ವಿಜಯವಾಣಿ ಸುದ್ದಿಜಾಲ ಉಡುಪಿ
ಈ ಹಿಂದೆ ಸಾಹಿತ್ಯ ಸಮ್ಮೇಳನಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದ ಅಧ್ಯಾಪನ ಮತ್ತು ವಿವಿಯಲ್ಲಿರುವ ಪ್ರಾಧ್ಯಾಪಕರು, ಸಾಹಿತಿ ಮನೋಭಾವದ ಅಧಿಕಾರಿಗಳು, ವಿದ್ವಾಂಸರು ಈಗ ಕಂಡುಬರುತ್ತಿಲ್ಲ. ಕಾಲೇಜು ಸಾಹಿತ್ಯದ ಬರಹದಿಂದ ಸ್ವಾಧ್ಯಾಯನದ ಬರಹಗಾರರು ಹೆಚ್ಚುತ್ತಿದ್ದು, ಅವರನ್ನು ಪ್ರೋತ್ಸಾಹಿಸಲು ಕನ್ನಡ ಕಮ್ಮಟ, ಸಾಹಿತ್ಯ ಶಿಬಿರಗಳು ನಡೆಯುವಂತಾಗಬೇಕೆಂದು ವಿಮರ್ಶಕ ಎಸ್.ಆರ್. ವಿಜಯಶಂಕರ ಆಶಯ ವ್ಯಕ್ತಪಡಿಸಿದರು.
ಪೂರ್ವಜರು ನೀಡಿದ ಕಲೆ, ಸಂಸ್ಕೃತಿ, ಸಂಪ್ರದಾಯಗಳ ಮೂಲಕ ಎಲ್ಲರ ಜೀವನ ಸಾಗುತ್ತಿದೆ. ಸಮಾಜದ ಋಣ ತೀರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಭಾಷೆಯ ಮೌಲ್ಯ ತಿಳಿಸಬೇಕಿದೆ. ಮಾತೃಭಾಷೆಯಿಂದ ಮಾತ್ರ ಉತ್ತಮ ಸಂಸ್ಕಾರ ಲಭಿಸಲು ಸಾಧ್ಯ. | ಪೂರ್ಣಿಮಾ. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಹೊಟ್ಟೆಯ ಹಸಿವಿನೊಂದಿಗೆ ಬೌದ್ಧಿಕ ಹಸಿವೂ ಇರಬೇಕು. ಭಾಷೆಯ ಕುರಿತಾಗಿ ದುರಭಿಮಾನ, ನಿರಭಿಮಾನ ಹಾಗೂ ಸದಭಿಮಾನ ಎಂಬ ಮೂರು ಬಗೆಯಿದೆ. ಸರ್ಕಾರ ಮತ್ತು ಪರಿಷತ್ನಿಂದ ಕನ್ನಡ ಭಾಷೆ ಉಳಿಯದು. ಎಲ್ಲೆಡೆ ಕನ್ನಡ ಜಾರಿ, ಜಾರಿ, ಜಾರಿ ಎನ್ನುತ್ತ ಅದೀಗ ಜಾರಿ ಹೋಗಿದೆ. ಈಗ ಹುಡುಕ್ರೀ, ಹುಡುಕ್ರೀ ಎಂಬಂತಾಗಿದೆ. | ಎಚ್. ಡುಂಡಿರಾಜ. ಹಾಸ್ಯ ಸಾಹಿತಿ