ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ

23Jaggu7
ಬೆಳಗಾವಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಶೈಲಜಾ ಭಿಂಗೆ ಅವರನ್ನು ಕಸಾಪ ತಾಲೂಕು ಘಟಕದಿಂದ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಶಿವಾನಂದ ತಲ್ಲೂರ, ಮಂಗಲಾ ಮೆಟಗುಡ್ಡೆ, ಎಂ.ವೈ. ಮೆಣಸಿನಕಾಯಿ, ಸುಮಾ ಕಿತ್ತೂರ ಇತರರಿದ್ದರು.
Published on

ಬೆಳಗಾವಿ: ತಾಲೂಕಿನ ಕಾಕತಿ ಗ್ರಾಮದಲ್ಲಿ ನಡೆಯಲಿರುವ ಬೆಳಗಾವಿ ತಾಲೂಕಿನ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಶೈಲಜಾ ಭಿಂಗೆ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಸಮ್ಮೇಳನಕ್ಕೆ ಗುರುವಾರ ಆಹ್ವಾನಿಸಲಾಯಿತು. ತಾಲೂಕು ಸಮ್ಮೇಳನ ಉಸ್ತುವಾರಿ ಶಿವಾನಂದ ತಲ್ಲೂರ ಮಾತನಾಡಿ, ನಾಲ್ಕು ದಶಕಕ್ಕೂ ಹೆಚ್ಚು ಕಾಲ ಬೆಳಗಾವಿ ತಾಲೂಕು ಸೇರಿ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಶೈಲಜಾ ಭಿಂಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಕಾರ್ಯ ನಿಜಕ್ಕೂ ಅನನ್ಯ. ಇದೀಗ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಅವರ ಸೇವೆಗೆ ಪ್ರತಿಯಾಗಿ ಗೌರವಿಸುವ ಭಾಗ್ಯ ಸಿಕ್ಕಿದೆ. ಅವರ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದರು. ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡೆ, ಎಂ.ವೈ. ಮೆಣಸಿನಕಾಯಿ, ಸುಮಾ ಕಿತ್ತೂರ, ಜಯಶೀಲಾ ಬ್ಯಾಕೋಡ, ಜ್ಯೋತಿ ಬದಾಮಿ, ಭಾರತಿ ಮಠದ, ನೀಲಗಂಗಾ ಚರಂತಿಮಠ, ಸುಮಿತ್ರಾ ಕರವಿನಕೊಪ್ಪ, ಸುವರ್ಣಾ ಕೋಲಕಾರ, ಅನ್ನಪೂರ್ಣಾ ಹಿರೇಮಠ, ರಮೇಶ ಬಾಗೇವಾಡಿ, ವೀರಭದ್ರ ಅಂಗಡಿ, ಲೇಖಕಿಯರ ಸಂಘದ ಸದಸ್ಯರು, ಸಾಹಿತ್ಯ ಪರಿಷತ್ತಿನ ಸದಸ್ಯರು ಇದ್ದರು. ಆಶಾ ಯಮಕನಮರಡಿ ಸ್ವಾಗತಿಸಿದರು. ಮಹೇಶ ಅಕ್ಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net