

ಮೂಡಿಗೆರೆ: ತಾಲೂಕು ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆಗೆ ವಾರ್ಡ್ ಪ್ರಾರಂಭಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಲು ತಾಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಇಒಗೆ ಸೂಚಿಸಲಾಯಿತು.
ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಂದರೇಶ್ ಮಾತನಾಡಿ, ತಾಲೂಕಿನಲ್ಲಿ 4870 ಮಂದಿಗೆ ಕರೊನಾ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 311 ಪಾಸಿಟಿವ್, 8 ಸಾವು ಸಂಭವಿಸಿದೆ. 2,682 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆ ನೀಡುವಂತೆ ಜನ ಒತ್ತಾಯಿಸುತ್ತಿದ್ದಾರೆ. ಹಾಗಾಗಿ ಎಂಜಿಎಂ ಆಸ್ಪತ್ರೆಯಲ್ಲೇ ಕರೊನಾ ವಾರ್ಡ್ ತೆರೆಯಬೇಕೆಂದು ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಪತ್ರ ಬರೆಯಲು ತಾಪಂ ಇಒ ವೆಂಕಟೇಶ್ಗೆ ತಿಳಿಸಿದರು.
ಕರೊನಾ ಸೋಂಕಿತನ ಚಿಕಿತ್ಸೆಗಾಗಿ ಸರ್ಕಾರದಿಂದ ಎಷ್ಟು ಹಣ ಬರುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲೂ ಚರ್ಚೆಯಾಗುತ್ತಿದೆ. ಕರೊನಾ ಚಿಕಿತ್ಸೆಗೆ ಯಾವ ಅನುದಾನ ಬಳಸಿಕೊಳ್ಳಲಾಗುತ್ತದೆ? ಎಂದು ತಾಪಂ ಅಧ್ಯಕ್ಷ ಕೆ.ಸಿ.ರತನ್ ಪ್ರಶ್ನಿಸಿದರು.
ಎಂಜಿಎಂ ಸಹಾಯಕ ಆಡಳಿತಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಕರೊನಾ ಸೋಂಕಿತರ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಸರ್ಕಾರದಿಂದ ಮಾಡಲಾಗುತ್ತದೆ. ಅದಕ್ಕಾಗಿ ಏಜೆನ್ಸಿ ಮೂಲಕ ಸೌಲಭ್ಯ ಒದಗಿಸಲಾಗುತ್ತದೆ. ಆದರೆ ಇಲಾಖೆಗೆ ಯಾವುದೆ ಅನುದಾನ ಬರುವುದಿಲ್ಲ. ಎಂಜಿಎಂ ಆಸ್ಪತ್ರೆಯಲ್ಲಿ ಕರೊನಾ ವಾರ್ಡ್ ತೆರೆಯಲು ಪರಿಶೀಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅರ್ಜಿ ವಿಲೇವಾರಿ ಮಾಡಿ: ತಾಲೂಕಿನಲ್ಲಿ 94ಸಿ ಅರ್ಜಿ ಅರ್ಜಿ ವಿಲೇವಾರಿ ಮಾಡದೆ ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಜನರನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಹಣವಿಲ್ಲದೆ ಯಾವುದೇ ಅರ್ಜಿ ವಿಲೇ ಮಾಡುತ್ತಿಲ್ಲವೆಂಬ ದೂರು ಕೇಳಿಬರುತ್ತಿದೆ. ಇದು ಹೀಗೇ ಮುಂದುವರಿದರೆ ಪ್ರತಿ ಗ್ರಾಮದಲ್ಲಿ ಸಭೆ ನಡೆಸಿ ಅಲ್ಲಿಗೆ ಅಧಿಕಾರಿಗಳನ್ನು ಕರೆಸಿ 94 ಸಿ ಅರ್ಜಿ ವಿಲೇಗೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿ ವೀಣಾಂಬಾ ಅವರನ್ನು ತಾಪಂ ಅಧ್ಯಕ್ಷ ಕೆ.ಸಿ.ರತನ್ ತರಾಟೆಗೆ ತೆಗೆದುಕೊಂಡರು.
ಮಲೆಮನೆಗೆ ಡಾಂಬರ್ ಹಾಕಿಸಿ: ಪ್ರವಾಹದಿಂದ ಹಾನಿಗೊಳಗಾದ ಮಲೆಮನೆ ಗ್ರಾಮಕ್ಕೆ ಮುಖ್ಯಮಂತ್ರಿ, ಸಚಿವರು ಭೇಟಿ ನೀಡಿದ್ದರು. ಜಿಪಂ 21 ಕೋಟಿ ರೂ. ಅನುದಾನ ನೀಡಿದೆ. ಆದರೆ ಮಲೆಮನೆ ರಸ್ತೆಗೆ ಡಾಂಬರು ಹಾಕಿಲ್ಲ. ಅನುದಾನ ಕೊರತೆಯಿದ್ದರೆ ಶಾಸಕರ ಗಮನಕ್ಕೆ ತರಬೇಕಿತ್ತು. ಕೇವಲ ನಿಮಗೆ ಬೇಕಾಗಿದ್ದ ಕೆಲಸದ ಪಟ್ಟಿ ಕಳಿಸಿದ್ದರಿಂದ ಜಿಲ್ಲಾಧಿಕಾರಿ ಅನುಮೋದನೆ ಕೊಟ್ಟಿದ್ದಾರೆ. ಇದೀಗ ಮಲೆಮನೆ ರಸ್ತೆ ಕಾಮಗಾರಿ ಬಗ್ಗೆ ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ಕೆಲಸ ಮಾಡಬೇಡಿ ಎಂದು ಇಂಜಿನಿಯರ್ಗಳನ್ನು ತಾಪಂ ಅಧ್ಯಕ್ಷ ಕೆ.ಸಿ.ರತನ್ ತರಾಟೆಗೆ ತೆಗೆದುಕೊಂಡರು.
ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜು, ಜಿಪಂ ಸದಸ್ಯರಾದ ಅಮಿತಾ ಮುತ್ತಪ್ಪ, ಪ್ರಭಾಕರ್,
ಅಭಿವೃದ್ಧಿ ಕಾಮಗಾರಿ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ತಾಪಂ ಉಪಾಧ್ಯಕ್ಷೆ ಪ್ರಮೀಳಾ,
94ಸಿ ಅರ್ಜಿ ವಿಲೇಗೆ ಕ್ರಮ ಕೈಗೊಳ್ಳಲು, ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶದಲ್ಲಿ