

ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಮುಂದಿನ ಸಭೆಯಲ್ಲಿ ಬಾಕಿ ಅರ್ಜಿಗಳ ಸಮಗ್ರ ಮಾಹಿತಿಯನ್ನು ಇಲಾಖಾ ಅಧಿಕಾರಿಗಳು ಸಭೆಗೆ ಹಾಜರುಪಡಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾ ಸಮಿತಿ ತಾಲೂಕು ಅಧ್ಯಕ್ಷ ರಮೇಶ್ ಕಾಂಚನ್ ಸೂಚನೆ ನೀಡಿದರು.
ಗುರುವಾರ ಉಡುಪಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿಡಿಪಿಒ ಕುಮಾರ್ ಮಾತನಾಡಿ, ಗೃಹಲಕ್ಷಿ$್ಮ ಯೋಜನೆಯಲ್ಲಿ ತಾಲೂಕಿನಲ್ಲಿ 42175 ಮಂದಿ ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ 39,823 ಮಂದಿ ಖಾತೆಗೆ ಹಣ ಜಮೆಯಾಗಿದೆ. ಕೊರಗ ಮತ್ತು ಮಲೆಕುಡಿಯ ಜನಾಂಗದ 575 ಮಂದಿ ಗೃಹಲಕ್ಷಿ$್ಮ ಯೋಜನೆಗೆ ಅರ್ಜಿ ಸಲ್ಲಿಸಿದ್ದು, 15 ಮಂದಿ ಅರ್ಜಿಗಳು ತಾಂತ್ರಿಕ ಕಾರಣದಿಂದ ಮಂಜೂರುಗೊಂಡಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿ ಅಧ್ಯಕ್ಷರು, ಯಾವ ಕಾರಣಕ್ಕಾಗಿ ಅರ್ಜಿಗಳು ಸ್ವೀಕೃತವಾಗಿಲ್ಲ ಎಂಬ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.
ಮೆಸ್ಕಾಂ ಇಂಜಿನಿಯರ್ ಗಣರಾಜ್ ಭಟ್ ಮಾತನಾಡಿ, ಗೃಹಜ್ಯೋತಿ ಯೋಜನೆಯಲ್ಲಿ ಮಣಿಪಾಲ ವಿಭಾಗದಲ್ಲಿ 30162 ಮಂದಿ ನೋಂದಾಯಿಸಿದ್ದು, 2.35 ಕೋಟಿ ಶೂನ್ಯ ಬಿಲ್ ನೀಡಲಾಗಿದೆ. ಉಡುಪಿ ವಿಭಾಗದಲ್ಲಿ 27998 ಮಂದಿ ನೋಂದಣಿ ಮಾಡಿಕೊಂಡಿದ್ದು, 2.52 ಕೋಟಿ ರೂ. ಶೂನ್ಯ ಬಿಲ್ ವಿತರಿಸಲಾಗಿದೆ. ಬಳಕೆದಾರರು ಗೃಹ ಜ್ಯೋತಿ ಯೋಜನೆಯಡಿ ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಯುವನಿಧಿ ಯೋಜನೆಯಲ್ಲಿ 545 ಮಂದಿ ನೋಂದಣಿ ಮಾಡಿಕೊಂಡಿದ್ದು, 453 ಮಂದಿಗೆ ಸಹಾಯಧನ ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ 29878 ಮಂದಿ ಬಿಪಿಎಲ್ ಕಾರ್ಡ್ದಾರರಲ್ಲಿ ಆಗಸ್ಟ್ನಲ್ಲಿ 27324 ಮಂದಿಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಇಒ ವಿಜಯಾ, ಅನುಷ್ಠಾನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.