

ಉಡುಪಿ: ಕೋವಿಡ್ ಸಮಯದಲ್ಲಿ ಅನೇಕ ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಈ ಮಾರ್ಗಗಳ ಪಟ್ಟಿಯನ್ನು ಒದಗಿಸಬೇಕು. ಜನರ ಬೇಡಿಕೆ ಇರುವ ಕಡೆಗಳಲ್ಲಿ ಬಸ್ ಸಂಚಾರ ಪುನಾರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.
ತಾ.ಪಂ.ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಚಿ, ಬಡಗಬೆಟ್ಟು, ಕುಕ್ಕೆಹಳ್ಳಿ, ಮಲ್ಪೆ, ಕೆಮ್ಮಣ್ಣು, ಮಣಿಪಾಲ ಭಾಗಕ್ಕೂ ಹೆಚ್ಚುವರಿ ಬಸ್ ಕಲ್ಪಿಸಿ ಮಹಿಳೆಯರಿಗೆ ಶಕ್ತಿ ಯೋಜನೆಯ ಸವಲತ್ತು ಸಿಗುವಂತಾಗಬೇಕು. ಅಲೆವೂರು& ಕೆಮ್ತೂರು, ಉಡುಪಿ&ಕಾರ್ಕಳ&ಆಗುಂಬೆ ಭಾಗಕ್ಕೂ ಬಸ್ ಸಂಪರ್ಕ ಒದಗಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ರಮೇಶ್ ಕಾಂಚನ್ ಸೂಚನೆ ನೀಡಿದರು.
ಕೆಎಸ್ಸಾರ್ಟಿಸಿ ಅಧಿಕಾರಿ ರವಿಚಂದ್ರ ಮಾತನಾಡಿ, ಕೋವಿಡ್ ಅವಧಿಯಲ್ಲಿ ಮಲ್ಲಾರು&ಬೆಳಪು, ಉದ್ಯಾವರ&ಪಿತ್ರೋಡಿ, ಉಡುಪಿ&ಪಟ್ಲ, ಉಡುಪಿ&ಪಡುಕೆರೆ ಭಾಗದಲ್ಲಿದ್ದ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನು ಮರು ಆರಂಭಿಸುವ ಬಗ್ಗೆ ವಿಭಾಗ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಚಾಲಕ&ನಿರ್ವಾಹಕರ ಸಮಸ್ಯೆಯಿಂದಾಗಿ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.
ಮೆಸ್ಕಾಂ ವ್ಯಾಪ್ತಿಯಲ್ಲಿ ಬಿಲ್ ಪಾವತಿ ಕೌಂಟರ್ಗಳನ್ನು ಸ್ಥಗಿತಗೊಳಿಸಿರುವುದರಿಂದ ಹಿರಿಯ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕಾಂಚನ್ ಸೂಚಿಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡುವ ಜತೆಗೆ ವಿವಿಧೆಡೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಗ್ಯಾರಂಟಿ ಯೋಜನೆಯ ಸವಲತ್ತು ಪಡೆಯಲು ಸಮಸ್ಯೆಗಳು ಎದುರಾಗುತ್ತಿದ್ದರೆ ನೇರವಾಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಹಶೀಲ್ದಾರ್ ಗುರುರಾಜ್ ಉಪಸ್ಥಿತರಿದ್ದರು.
ಕೋಟ್........
ಗೃಹಲಕ್ಷಿ$್ಮ ಯೋಜನೆಯಲ್ಲಿ 42613 ಮಂದಿ ನೋಂದಣಿ ಮಾಡಿಕೊಂಡಿದ್ದು, ಅಕ್ಟೋಬರ್ ತಿಂಗಳಲ್ಲಿ 7,97,86,000 ಮೊತ್ತ ಖಾತೆಗೆ ಜಮೆ ಮಾಡಲಾಗಿದೆ. ಜಿಎಸ್ಟಿ ಪಾವತಿ ಕಾರಣದಿಂದ 1402 ಅರ್ಜಿಗಳು ತಿರಸತಗೊಂಡಿದ್ದು, 760 ಅರ್ಜಿದಾರರಿಗೆ ಎನ್ಪಿಸಿ ಮ್ಯಾಪಿಂಗ್ ಆಗದೆ ಹಣ ಪಾವತಿ ಸಾಧ್ಯವಾಗಿಲ್ಲ.
ಕುಮಾರ್ , ಸಿಡಿಪಿಒ ಉಡುಪಿ