ತಾಲೂಕಿಗೆ ರಾಜ್ಯದಲ್ಲೇ ಹೆಚ್ಚು ಅನುದಾನ

ತಾಲೂಕಿಗೆ ರಾಜ್ಯದಲ್ಲೇ ಹೆಚ್ಚು ಅನುದಾನ
Published on

ಮದ್ದೂರು: ತಾಲೂಕಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ರಾಜ್ಯದಲ್ಲೇ ಅತಿ ಹೆಚ್ಚು ಅನುದಾನ ನೀಡಿರುವುದು ಪ್ರಶಂಸನೀಯ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ತಾಲೂಕಿನ ಬೆಸಗರಹಳ್ಳಿಯಲ್ಲಿ ಶನಿವಾರ 5 ಕೋಟಿ ರೂ. ವೆಚ್ಚದ ನಾಲಾ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು. 2 ವರ್ಷದ ಅವಧಿಯಲ್ಲಿ ಸುಮಾರು 1300 ಕೋಟಿ ರೂ. ಗಳ ಅನುದಾನ ಸಿಕ್ಕಿರುವುದು ಮದ್ದೂರು ಕ್ಷೇತ್ರಕ್ಕೆ ಮಾತ್ರವೆಂದ ಅವರು ಜನರು ತಮ್ಮ ಗ್ರಾಮಗಳಲ್ಲಿ ಕಾಮಗಾರಿಗಳು ನಡೆಯುವ ವೇಳೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಗಮನಹರಿಸಬೇಕು ಎಂದರು.

ಶಾಸಕನಾಗಿ ಆಯ್ಕೆಯಾದ 2 ವರ್ಷದ ಅವಧಿಯಲ್ಲಿ ರಸ್ತೆ, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಹಲವು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಗಳ ಅನುದಾನ ತಂದಿದ್ದೇನೆ. ಅದರಲ್ಲಿ ನೂರಾರು ಕೋಟಿಯ ನೀರಾವರಿ ಅಭಿವೃದ್ಧಿ ಕಾಮಗಾರಿಗಳು ಸೇರಿವೆ ಎಂದರು.

ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಪ್ರಮುಖರಾದ ಶರತ್, ಬಾಬು, ಧನಂಜಯ, ಸುಧಾಕರ್, ಪ್ರಭುಲಿಂಗು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net