ಪೆಂಡಾಲ ಮಾಲೀಕರ ತಾಲೂಕು ಸಮಾವೇಶ

Taluk Convention of Pendala Owners
ಗುಳೇದಗುಡ್ಡದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮತ್ಯುಂಜಯ ಕರನಂದಿ ಮಾತನಾಡಿದರು.
Published on

ಗುಳೇದಗುಡ್ಡ : ಗಂಗಾವತಿಯ ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವದ್ಧಿ ಸಂಘ ಹಾಗೂ ಗುಳೇದಗುಡ್ಡ ತಾಲೂಕು ಪೆಂಡಾಲ್ ಲೈಟಿಂಗ್, ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವದ್ಧಿ ಸಂಘದ ವತಿಯಿಂದ ಗುಳೇದಗುಡ್ಡ ತಾಲೂಕಿನ ಸಮಾವೇಶ ಖಣದ ನಗರಿ ವೈಭವ 2025 ಕಾರ್ಯಕ್ರಮವನ್ನು ಜು. 13ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಆರ್.ಜಿ. ಕರನಂದಿಯವರ ಶಿವಕಪಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ಯುಂಜಯ ಕರನಂದಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಾವೇಶ ಸಾನ್ನಿಧ್ಯವನ್ನು ಅಮರೇಶ್ವರ ಮಠದ ಡಾ. ನೀಲಕಂಠ ಶಿವಾಚಾರ್ಯರು, ಮುರುಘಾಮಠದ ಶ್ರೀ ಕಾಶೀನಾಥ ಸ್ವಾಮಿಗಳು, ಗುರುಸಿದ್ಧೇಶ್ವರ ಮಠದ ಶ್ರೀ ಜ. ಗುರುಸಿದ್ಧ ಪಟ್ಟದಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಶಾಸಕ ಭೀಮಸೇನ ಚಿಮ್ಮನಕಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಶರಣಬಸು ಕರನಂದಿ ಅಧ್ಯಕ್ಷತೆ ವಹಿಸುವರು.

ಸಂಘದ ಅಧ್ಯಕ್ಷ ಅಬ್ದುಲ್ ಕರೀಮ್ ಅತ್ತಾರ, ಪ್ರಧಾನ ಕಾರ್ಯದರ್ಶಿ ಮತ್ಯುಂಜಯ ಕರನಂದಿ, ಖಜಾಂಚಿ ದಾವೂದ ಕನಸಾವಿ, ಸಂಘಟನಾ ಕಾರ್ಯದರ್ಶಿ ಬಾಲಗುರುನಾದಮ್, ಜಿಲ್ಲಾಧ್ಯಕ್ಷ ಮಹಮ್ಮದ ಜಕ್ಕಲಿ ಹಾಗೂ ವಿಶೇಷ ಆಹ್ವಾನಿತರಾಗಿ ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಶಾಸಕರಾದ ರಾಜಶೇಖರ ಶೀಲವಂತ, ಎಸ್.ಜಿ. ನಂಜಯ್ಯನಮಠ, ಎಂ.ಕೆ. ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಮಹಾಂತೇಶ ಮಮದಾಪೂರ, ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಮತ್ತಿತರರು ಪಾಲ್ಗೊಳ್ಳುವರು ಎಂದು ಹೇಳಿದರು.

ಸಂಘದ ಗೌರವಾಧ್ಯಕ್ಷ ಪ್ರಭು ತಟ್ಟಿಮಠ, ಉಪಾಧ್ಯಕ್ಷರಾದ ರಾಜು ಮುನವಳ್ಳಿ, ಮಹೇಶ ಮೊಕಾಶಿ, ಸಂತೋಷ ಕರನಂದಿ, ವೆಂಕಟೇಶ ಮಹೇಂದ್ರಕರ, ಮಂಜುನಾಥ ಭಗವತಿ, ರಮೇಶ ಕಾಳಗಿ, ಬಸವರಾಜ ಹಂಡಿ, ಮೋಹನ ಕರನಂದಿ, ರಾಘವೇಂದ್ರ ಬಳಗೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net