ಕಾರಿಗನೂರು-ಕತ್ತಲಗೆರೆ ಕಾಲೇಜು ತಂಡಕ್ಕೆ ಜಯ

dj chn sports
Published on

ದಾವಣಗೆರೆ: ಚನ್ನಗಿರಿ ತಾಲೂಕಿನ ಕಾರಿಗನೂರು-ಕತ್ತಲಗೆರೆಯ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡ ಥ್ರೋಬಾಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಚನ್ನಗಿರಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದ

ಥ್ರೋಬಾಲ್ ಸ್ಪರ್ಧೆಯಲ್ಲಿ ಕಾರಿಗನೂರು-ಕತ್ತಲಗೆರೆಯ ಕಾಲೇಜಿನ ಬಾಲಕರ ತಂಡ ಸೆಮಿಫೈನಲ್‌ನಲ್ಲಿ ಸಂತೇಬೆನ್ನೂರು ತಂಡದ ಎದುರು ಗೆಲುವು ಸಾಧಿಸಿ ಫೈನಲ್‌ಗೇರಿತ್ತು.

ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕಾರಿಗನೂರು-ಕತ್ತಲಗೆರೆ ತಂಡ, ಆತಿಥೇಯ ಚನ್ನಗಿರಿ ತಂಡದ ವಿರುದ್ಧ 25-18 ಅಂಕಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ಬಾಲಕಿಯರ ವಿಭಾಗದಲ್ಲಿ ಸೆಮೀಸ್‌ನಲ್ಲಿ ಬಸವಾಪಟ್ಟಣ ತಂಡದ ಎದುರು ರೋಚಕ ಜಯ ಸಾಧಿಸಿದ ಕಾರಿಗನೂರು-ಕತ್ತಲಗೆರೆ ಕಾಲೇಜು ತಂಡ ಫೈನಲ್ ಪಂದ್ಯದಲ್ಲಿ 25-21 ಅಂಕಗಳಿಂದ ಚನ್ನಗಿರಿ ತಂಡವನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಟ್ಟಿತು.

ಕಾಲೇಜಿನ ಪ್ರಾಚಾರ್ಯ ಶಿವಾನಂದ ಕುಡಪಲಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಸಿ.ಬಿ.ರವಿ, ಉಪನ್ಯಾಸಕರಾದ ಚಂದ್ರಶೇಖರಯ್ಯ,

ಲಿಂಗರಾಜ್ ಜೋಗಿಹಳ್ಳಿ, ರಾಜೇಶ್, ಶಿಲ್ಪಾಶ್ರೀ, ದಿವ್ಯಾಶ್ರೀ, ಚಂದ್ರಕಲಾ ಕಾಲೇಜು ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net