ತಾಲೂಕು ಆಡಳಿತದಿಂದ ಸಸಿ ವಿತರಣೆ

7-msk-1A
Published on

ಮಸ್ಕಿ: ಪಟ್ಟಣದಲ್ಲಿ ಬೆಳಗ್ಗೆ ಏಳರಿಂದ ಒಂಬತ್ತರವರೆಗೆ ನೀರಸ ಮತದಾನ ಕಂಡುಬಂದರೂ 11ರ ನಂತರ ಜನರು ಮತಗಟ್ಟೆಗೆ ಬರಲು ಆರಂಭಿಸಿದರು. ಗ್ರಾಮೀಣ ಭಾಗದಲ್ಲಿ ರೈತರು, ಮಹಿಳೆಯರು ಗುಂಪು ಗುಂಪಾಗಿ ಆಗಮಿಸಿ ಮತದಾನದಲ್ಲಿ ಭಾಗವಹಿಸಿದರು.

ತೊರಣದಿನ್ನಿಯಲ್ಲಿ ಸರತಿ ಸಾಲಿನಲ್ಲಿ ಹೆಚ್ಚು ಜನ ನಿಂತಿದ್ದರಿಂದ ಹಲವು ಮಹಿಳೆಯರು ಶಾಲಾ ಕಾಂಪೌಂಡಿನಲ್ಲಿ ಕುಳಿತರು. ಮೆದಕಿನಾಳ, ತಲೆಖಾನ, ಸಂತೆಕೆಲ್ಲೂರು, ಅಂಕುಶದೊಡ್ಡಿ, ಗುಡದೂರು ಹಾಗೂ ಬಳಗಾನೂರಿನಲ್ಲಿ ಮತದಾನ ಶಾಂತಿಯಿಂದ ನಡೆಯಿತು. ಪಟ್ಟಣದಲ್ಲಿ ಮತದಾರರಿಗೆ ತಾಲೂಕು ಆಡಳಿತದಿಂದ ಸಸಿ ವಿತರಿಸಲಾಯಿತು. ಶಾಸಕ ಬಸನಗೌಡ ತುರ್ವಿಹಾಳರು ತುರ್ವಿಹಾಳದಲ್ಲಿ ಮತ ಚಲಾಯಿಸಿದರು.

ಪಟ್ಟಣದ ಕಿಲ್ಲಾ ಶಾಲೆ ಬೂತ್‌ನಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರು ಕುಟುಂಬ ಸಮೇತ ಮತದಾನ ಮಾಡಿದರು. ಮಾಜಿ ಎಂಎಲ್ಸಿ ಶರಣಪ್ಪ ಮಟ್ಟೂರು ಅವರು ಮಟ್ಟೂರು ಗ್ರಾಮದಲ್ಲಿ ಮತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net