ತಾಲೂಕಾಡಳಿತದ ಕನಕದಾಸ ಜಯಂತ್ಯುತ್ಸವಕ್ಕೆ ಕುರುಬ ಸಮಾಜದಿಂದ ಬಹಿಷ್ಕಾರ

Published on

ಬಸವನಬಾಗೇವಾಡಿ: ತಾಲೂಕು ಆಡಳಿತದಿಂದ ನ.18 ರಂದು ಜರುಗುವ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ತಾಲೂಕು ಕುರುಬ ಸಮಾಜದ ಬಾಂಧವರು ಯಾರೂ ಕೂಡ ಭಾಗವಹಿಸಬಾರದೆಂದು ತಾಲೂಕು ಕುರುಬ ಸಮಾಜದ ಬಾಂಧವರು ಸಭೆಯಲ್ಲಿ ತೀರ್ಮಾನಿಸಿದ್ದಾರೆ.

ಕರ್ನಾಟಕ ಪ್ರದೇಶ ಕುರುಬ ಸಂಘದ ವಿವಿಧ ಹುದ್ದೆಗಳ ಪದಾಧಿಕಾರಿಗಳು ಹಾಗೂ ತಾಲೂಕು ಕುರುಬ ಸಮಾಜದ ಬಾಂಧವರು ಶನಿವಾರ ಪಟ್ಟಣದ ವಿಜಯಪುರ ರಸ್ತೆಯ ಈರಕಾರ ಮುತ್ಯಾ ದೇವಸ್ಥಾನ ಅವರಣದಲ್ಲಿ ಸಭೆಯಲ್ಲಿ ನಿರ್ಧರಿಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಕನಕದಾಸರ ವೃತ್ತ ನಿರ್ಮಾಣ ಮಾಡಲು ಸ್ಥಳ ಅವಕಾಶ ನೀಡಬೇಕೆಂದು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸಮಾಜ ಬಾಂಧವರು ತೀರ್ಮಾನಿಸಿದ್ದಾರೆ.

ನ.19 ರಂದು ಇನ್ನೊಮ್ಮೆ ವಿಜಯಪುರ ರಸ್ತೆ ಈರಕಾರ ಮುತ್ಯಾ ದೇವಸ್ಥಾನದ ಅವರಣದಲ್ಲಿ ಸಭೆ ಸೇರಿ ಅದ್ದೂರಿಯಾಗಿ ಕನಕದಾಸರ ಜಯಂತಿ ಆಚರಿಸಲು ದಿನಾಂಕ ನಿಗದಿ ಮಾಡಲು ನಿರ್ಧರಿಸಲಾಯಿತು.

ಕುರುಬ ಸಮಾಜದ ತಾಲೂಕಾಧ್ಯಕ್ಷ ರಾಜಶೇಖರ ಯರನಾಳ, ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಹೆರಕಲ್ಲ, ಸಮಾಜದ ಬಾಂಧವರಾದ ಅರವಿಂದ ಡೋಣೂರ, ಎಲ್.ಬಿ. ಕಂದಗಲ್ಲ, ಕರೆಯಪ್ಪ ಬೆಂಚೊಡೆ, ಎಸ್.ಜಿ. ಹೊಕ್ರಾಣಿ, ಪರಶುರಾಮ ಪೂಜಾರಿ, ಲಕ್ಕಪ್ಪ ಚಿರ್ಚನಕಲ್ಲ, ಶಂಕರಪ್ಪ ಪೂಜಾರಿ, ಬಾಲಚಂದ್ರ ಮಾಳಗೊಳ, ಮುತ್ತು ಪೂಜಾರಿ, ಶಿವಾನಂದ ಕೆರೂಟಗಿ, ರಾಜೇಶ್ವರಿ ಯರನಾಳ, ಪರಸಪ್ಪ ಕಳ್ಳುಗುಡ್ಡ, ಮಲ್ಲು ಸೇಬಗೊಂಡ, ಯಲ್ಲಾಲಿಂಗ ಜ್ಯೋತಿ, ಮುದುಕಣ್ಣ ಹೊರ್ತಿ, ಮಲ್ಲು ಅಂಬಳನೂರ, ಮಹೇಶ ಹಿರೇಕುರುಬರ, ಎಸ್.ಜಿ. ವಾಲೀಕಾರ, ಸಂಗಣ್ಣ ಹಂಚಾಳ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net