ನಿಸ್ವಾರ್ಥ ಸೇವೆಯೇ ಮಾನವನಿಗೆ ಭೂಷಣ: ಡಾ.ತಲ್ಲೂರು

udp-5-talluru
Published on

ಉಡುಪಿ: ಮಾನವ ತಾನು ಗಳಿಸಿದ ಸಂಪತ್ತಿನ ಒಂದು ಪಾಲನ್ನು ಸಮಾಜದ ಶ್ರೇಯಸ್ಸಿಗೆ ಮೀಸಲಿಡುವ ಮೂಲಕ ಸಮಾಜದ ಋಣ ತೀರಿಸುವ ಕಾರ್ಯ ಮಾಡಬೇಕು. ನಿಸ್ವಾರ್ಥ ಭಾವನೆಯಿಂದ ಮಾಡಿದ ಸೇವೆ ಮನುಷ್ಯನಿಗೆ ಭೂಷಣ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಕಡೆಕಾರಿನ ಮೂಡನಿಡಂಬೂರು ಯುವಕ ಮಂಡಲ ಹಾಗೂ ನಿಡಂಬೂರು ಯುವಕ ಮಂಡಲ ಟ್ರಸ್ಟ್​ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿರುವುದು,ತಂಡೆತಾಯಿ ವೃದ್ದಾಪ್ಯದಲ್ಲಿ ವೃದ್ಧಾಶ್ರಮವನ್ನು ಸೇರುವ ಪ್ರಸಂಗಗಳನ್ನು ಕಂಡಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಇದಕ್ಕೆ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕುಸಿತವಾಗಿರುವುದೇ ಕಾರಣ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್​ ಅವರು ಮಾತನಾಡಿ, ಮಾನವ ಜೀವನ ಶ್ರೇಷ್ಠ್ಠ. ಸಮಾಜದಲ್ಲಿ ದೀನರಿಗೆ, ಸಂಕಷ್ಟದಲ್ಲಿರುವವರಿಗೆ ನಾವು ಯಾವತ್ತೂ ನೆರವಿನ ಹಸ್ತ ಚಾಚಬೇಕು ಎಂದು ಹೇಳಿದರು.
ಶಾಸಕ ಯಶಪಾಲ್​ ಸುವರ್ಣ ಹಾಗೂ ಕಡೆಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಕರ ಶೇರಿಗಾರ್​, ಧರ್ಮದರ್ಶಿ ಡಾ.ಎನ್​.ಬಿ.ವಿಜಯ ಬಲ್ಲಾಳ್​ ಅವರಿಗೆ ಗೌರವಾರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ತಲ್ಲೂರು ಪ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ರ್ನಡಂಬೂರು ಯುವಕ ಮಂಡಲದ ಗೌರವಾಧ್ಯಕ್ಷ ರವೀಂದ್ರ ಕೆ.ಪೂಜಾರಿ ಉಪಸ್ಥಿತರಿದ್ದರು. ನಿಡಂಬೂರು ಯುವಕ ಮಂಡಳ ಟಸ್ಟ್​ ಅಧ್ಯಕ್ಷ ಕೆ.ಶ್ರೀನಿವಾಸ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಕ ಮಂಡಲದ ಗೌರವಾಧ್ಯಕ್ಷ ಜಯಕರ ಸುವರ್ಣ ಸ್ವಾಗತಿಸಿ, ವಿಜಯ ಕಡೆಕಾರ್​ ನಿರೂಪಿಸಿದರು. ದೀಪಕ್​ ರಾಜ್​ ವರದಿ ವಾಚಿಸಿದರು. ಶೇಖರ್​ ಅಂಚನ್​ ಪರಿಚಯಿಸಿದರು. ಗಿರಿಜಾ ಸರ್ಜಿಕಲ್​ನ ಮುಖ್ಯಸ್ಥ ರವೀಂದ್ರ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net