ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಲಯನ್ಸ್ ಗೌರವ

udp-18-talluru
Published on

ಉಡುಪಿ : ಮಲ್ಪೆ ತೊಟ್ಟಂನ ಸೈಂಟ್ ಆ್ಯನ್ಸ್ ಚರ್ಚ ವಿದ್ಯಾದಾಯಿನಿ ಸಭಾಂಗಣದಲ್ಲಿ ಬುಧವಾರ ನಡೆದ ಲಯನ್ಸ್ ಮತ್ತು ಲಿಯೋ ಕ್ಲಬ್ ಮಲ್ಪೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ, ಲಯನ್ಸ್ ಜಿಲ್ಲೆ 317ಸಿಯ ಮಾಜಿ ಗವರ್ನರ್ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಪದಗ್ರಹಣ ಅಧಿಕಾರಿ 2022-23ನೇ ಸಾಲಿನ ಮಲ್ಟಿಪಲ್ ಕೌನ್ಸಿಲ್ ಚಯರ್‌ಪರ್ಸನ್ ವಸಂತ್ ಕುಮಾರ್ ಶೆಟ್ಟಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ,ಲಯನ್ಸ್ ಗಣ್ಯರುಗಳಾದ ಸುನೀಲ್ ಕುಮಾರ್ ಶೆಟ್ಟಿ, ಡಿ.ಶ್ರೀಧರ ಶೇಣವ, ಬೆನಗಲ್ ನಾಗಪ್ಪ ಅಮೀನ್, ಗೋಪಾಲ ಸಿ.ಬಂಗೇರ, ವಿಜಯಾ ಸಿ.ಬಂಗೇರ, ಡಾ.ಗಂಗಾಧರ ಸಾಲ್ಯಾನ್, ವೆಂಕಟೇಶ್ ಕಾಮತ್, ಕೇಶವ ಎಂ.ಕೋಟ್ಯಾನ್, ಮಲ್ಪೆ ಲಯನ್ಸ್ ಕ್ಲಬ್ ಅಧ್ಯಕ್ಷ ಹರಿನಾಥ್ ಕೆ.ಸುವರ್ಣ, ಕಾರ್ಯದರ್ಶಿ ರವೀಂದ್ರ ಕರ್ಕೇರ, ಕೋಶಾಧಿಕಾರಿ ಕರುಣಾಕರ ಬಂಗೇರ, ಲಿಯೋ ಅಧ್ಯಕ್ಷ ಚಿರಾಗ್ ಎಸ್.ಪೂಜಾರಿ, ಕಾರ್ಯದರ್ಶಿ ನಂದನ್ ಕುಂದರ್, ಕೋಶಾಧಿಕಾರಿ ಪ್ರಥಮ್ ಎಸ್.ಸಾಲ್ಯಾನ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net