ಸಿದ್ಧೌಷಧದ ಬಗ್ಗೆ ಜಟಾಪಟಿ

HDK-Siddaramaiah
Published on

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿ ಒಂದು ವರ್ಷದ ಸಂದರ್ಭದಲ್ಲಿ ‘ಸಿದ್ಧೌಷಧ’ ವಿಷಯ ಸ್ವಾರಸ್ಯಕರ ಜಟಾಪಟಿ ನಡೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುರಿಯಾಗಿಸಿ ಸಿದ್ಧೌಷಧ ಎಂದು ಕುಟುಕಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ,’ ಅವರ ತಾತ್ಪರ್ಯವೆಲ್ಲ ನನಗೆ ಅರ್ಥವಾಗಲ್ಲ. ಇವರು ಬರೆದಿರೋ ಕನ್ನಡ ಅರ್ಥವಾಗಲ್ಲ’ ಎಂದು ಆರೋಪವನ್ನು ಸಾರಾಸಗಟಾಗಿ ಕೊಡವಿದ್ದಾರೆ.

ಕುಟುಕಿದ ಕುಮಾರಸ್ವಾಮಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ರಾಜ್ಯದಲ್ಲಿ 8 ಇಲ್ಲವೆ 10 ಸ್ಥಾನ ಗೆಲ್ಲಬಹುದಿತ್ತು ಎಂದು ಸಿದ್ದರಾಮಯ್ಯ ಅವರು ಇತಿ್ತೕಚಿಗೆ ‘ಮೆಲುಕು’ ಹಾಕಿದ್ದರಿಂದಲೇ ನಾನು ‘ಸಿದ್ಧೌಷಧ’ದ ಬಗ್ಗೆ ನೆನಪಿಸಿಕೊಳ್ಳಬೇಕಾಯಿತು. ಅವರ ಕನಸá--ಕನವರಿಕೆಗಳನ್ನು ಮೈತ್ರಿ ಸರ್ಕಾರ ಹೋದ ನಂತರವೂ ಜಪಿಸುತ್ತಿರುವುದರಿಂದಲೇ ಹಳೆಯದನ್ನು ನೆನಪಿಸಿಕೊಳ್ಳಬೇಕಾಯಿತು. ನಮ್ಮ ಅವರ ದೋಸ್ತಿ ಕಳಚಿದ ನಂತರ ಈ ಬಗ್ಗೆ ನಾನು ಮಾತನಾಡಿರಲಿಲ್ಲ್ಲ ಕಾಂಗ್ರೆಸ್ ನಾಯಕರೇ ಪದೇಪದೆ ಮೈತ್ರಿ ಮುಗಿದ ಅಧ್ಯಾಯ ಎಂದು ಈಗ ತುಟಿ ಬಿಚ್ಚುತ್ತಿರುವುದರಿಂದ ನಾನು ಮೌನ ಮುರಿಯಬೇಕಾಯಿತು. ಕಾಂಗ್ರೆಸ್ ನಾಯಕರು ಈಗ ಮರಣೋತ್ತರ ಪರೀಕ್ಷೆ ಬಗ್ಗೆ ರಾಗ ಎಳೆಯುತ್ತಿದ್ದಾರೆ. ಆದರೆ ವರದಿಯಲ್ಲಿ ಏನಿದೆ ಎಂಬ ಸತ್ಯಾಂಶವನ್ನು ನಾನು ಹೇಳಿದರೆ ಆ ಭಾಷೆ ನನಗೆ ಅರ್ಥವಾಗಲಿಲ್ಲ ಎಂದು ಜಾರಿಕೊಳ್ಳುವುದು ತರವಲ್ಲ.

ಮೊಟಕಿದ ಸಿದ್ದರಾಮಯ್ಯ: ಅದೆಲ್ಲ ಮುಗಿದು ಹೋದ ಕಥೆ. ಅವರು ಯಾಕೆ ಈಗ ಮತ್ತೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಹೋಗಿರೋದು ಗೊತ್ತಿದೆ. ಈಗ ಬಿಜೆಪಿ ಸರ್ಕಾರ ಒಂದು ವರ್ಷ ಪೂರೖಸುತ್ತಿದೆ. ಈಗ ಯಾಕೆ ಸಮ್ಮಿಶ್ರ ಸರ್ಕಾರದ ಬಗ್ಗೆ ಚರ್ಚೆ. ಬಿಜೆಪಿ ಸರ್ಕಾರದ ಬಗ್ಗೆ ಮಾತಾಡೋದು ಬಿಟ್ಟು ಕುಮಾರಸ್ವಾಮಿ ಬಗ್ಗೆ ನಾನ್ಯಾಕೆ ಮಾತಾಡಲಿ? ಅವರ ತಾತ್ಪರ್ಯವೆಲ್ಲ ನನಗೆ ಅರ್ಥವಾಗಲ್ಲ. ಇವರ ಬರೆದಿರೋ ಕನ್ನಡವೆಲ್ಲ ಅರ್ಥವಾಗಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net