ನ್ಯಾಯ ಸಮ್ಮತ ಹೋರಾಟ ಬೆಂಬಲಿಸುವೆ

TLK-19-1
Published on

ತಾಳಿಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಕೈಗೊಂಡಿರುವ ಸತ್ಯಾಗ್ರಹದ ಮಂಗಳವಾರ ಅಸ್ಕಿ ಫೌಂಡೇಷ ವತಿಯಿಂದ ಬೆಂಬಲ ವ್ಯಕ್ತಪಡಿಸಲಾಯಿತು.

ಸ್ಥಳಕ್ಕೆ ಭೇಟಿ ನೀಡಿದ ಫೌಂಡೇಷ ಅಧ್ಯಕ್ಷ, ಸಮಾಜ ಸೇವಕ ಸಿ.ಬಿ.ಅಸ್ಕಿ ಮಾತನಾಡಿ, ನ್ಯಾಯ ಸಮ್ಮತ ಹೋರಾಟಗಳು ಎಲ್ಲೆ ನಡೆದರೂ ಅವುಗಳನ್ನು ಅಸ್ಕಿ ಫೌಂಡೇಷನ್ ಸದಾ ಬೆಂಬಲಿಸುತ್ತದೆ. ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಕೈಗೊಂಡಿರುವ ಹೋರಾಟ ಸತ್ಯಾಂಶದಿಂದ ಕೂಡಿದೆ.

ರಸಭೆಯಲ್ಲಾದ ಅವ್ಯವಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಸತ್ಯಾಗ್ರಹ 9ನೇ ದಿನಕ್ಕೆ ಕಾಲಿಟ್ಟರೂ ಜಿಲ್ಲಾಧಿಕಾರಿಗಳಾಗಲಿ ಅಥವಾ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳಾಗಲಿ ಭೇಟಿ ನೀಡದಿರುವುದು ವಿಪರ್ಯಾಸ ಎಂದರು.

ತಾಳಿಕೋಟೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸುರೇಶ ಹಜೇರಿ, ಸುಭಾಸ ಗೌಡಗೇರಿ, ರಮೇಶ ಮೋಹಿತೆ, ಅಶೋಕ ವಠಾರ, ರವಿ ಕಟ್ಟಿಮನಿ, ಚಂದ್ರು ಮಠಪತಿ, ಸುರೇಶ ಹಜೇರಿ, ನಿಂಗನಗೌಡ ದೇಸಾಯಿ, ನದೀಂ ಕಡು, ಪತ್ತೇಅಹ್ಮದ ನಾಯ್ಕೋಡಿ, ಜುಮ್ಮಣ್ಣ ಕಟ್ಟಿಮನಿ, ಭೀಮನಗೌಡ ದೇಸಾಯಿ, ಶಿವಪುತ್ರಗೌಡ ನಾಲತವಾಡ, ಸಂಜು ಬೂಸಾರೆ, ಕಾಶಿನಾಥ ಧರಿ, ಶಿವಣ್ಣ ಕುಂಬಾರ, ಯಮನಪ್ಪ ಠಣಕೇದಾರ, ಅಸ್ಕಿ ಫೌಂಡೇಷನ್ ತಾಲೂಕು ಸಂಚಾಲಕ ವೀರೇಶ ಅಸ್ಕಿ, ರಹಿಮಸಾಬ ಅವಟಿ, ಯಲ್ಲಪ್ಪ ಮಾದರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net