

ತಾಳಿಕೋಟೆ: ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೇನ್‌ಶನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಆಶ್ರಯದಲ್ಲಿ ತಾಲೂಕಿನಲ್ಲಿ ಶುಕ್ರವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ನೇತೃತ್ವದಲ್ಲಿ ಏಡ್ಸ್ ಕುರಿತು ಮನೆ ಮನೆ ಜನಜಾಗೃತಿ ಆಂದೋಲನ ಕಾರ್ಯಕ್ರಮ ಪ್ರಾರಂಭಗೊಂಡಿತು.
ಪಟ್ಟಣದ ರಾಜವಾಡೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಪುರಸಭೆ ಸದಸ್ಯರಾದ ದುಂಡಪ್ಪಗೌಡ ಪಾಟೀಲ ಹಾಗೂ ಮುದಕಣ್ಣ ಬಡಿಗೇರ ಕರ ಪತ್ರ ವಿತರಿಸುವ ಮೂಲಕ ಚಾಲನೆ ನೀಡಿದರು.
ಪಟ್ಟಣದ 23 ವಾರ್ಡ್‌ಗಳಲ್ಲಿಯೂ ಜ. 11 ರವರೆಗೆ ಈ ಆಂದೋಲನ ಕಾರ್ಯಕ್ರಮ ನಡೆಯಲಿದೆ. ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ಆಪ್ತ ಸಮಾಲೋಚಕಿ ಕಲ್ಪನಾ ಹೂಗಾರ, ಪ್ರಯೋಗ ಶಾಲೆ ತಂತ್ರಜ್ಞಾನ ನಂದಬಸಯ್ಯ ಹಿರೇಮಠ, ಕಿರಿಯ ಆರೋಗ್ಯ ಸಹಾಯಕ ಎ್.ಎ. ಅತ್ತಾರ, ಮುಧು ಟಕ್ಕಳಕಿ, ಕೆಎಚ್‌ಪಿಟಿ ಕಾರ್ಯಕರ್ತ ಮಂಜುನಾಥ ಹಿರೇಮಠ, ಆಶಾ ಕಾರ್ಯಕರ್ತೆ ಇಂದ್ರಾಬಾಯಿ ಕದಂ ಅವರು ಪುರಸಭೆ ಸದಸ್ಯರೊಂದಿಗೆ ಮನೆ ಮನೆಗೆ ತೆರಳಿ ಕರ ಪತ್ರ ಹಂಚಿ ಏಡ್ಸ್ ರೋಗದ ಕುರಿತು ತಿಳಿವಳಿಕೆ ನೀಡಿದರು.
ಬಸಪ್ಪ ಧರಿ, ಗುರಣ್ಣ ಬ್ಯಾಕೋಡ, ಕಾಶಿನಾಥ ಮೈಲೇಶ್ವರ, ಚಂದ್ರಶೇಖರ ಮಠಪತಿ, ರಾಮು ಜಗತಾಪ, ಗುಂಡುರಾವ್ ಜಗತಾಪ ಮತ್ತಿತರರಿದ್ದರು.