ಮಹಾರಾಣಾ ಪ್ರತಾಪಸಿಂಹ ವೃತ್ತ ನಿರ್ಮಿಸಲು ಭೂಮಿಪೂಜೆ ನಾಳೆ

Talikote, Rajput Samaj, Maharana Pratapasimha, Murthy, Harisingh Moolimani, Khasgateshwar Mutt, Bala Shivayogi Siddhalinga Devaru,
ತಾಳಿಕೋಟೆಯಲ್ಲಿ ಮಹಾರಾಣಾ ಪ್ರತಾಪಸಿಂಹ್ ವೃತ್ತ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ಕುರಿತ ಸುದ್ದಿಗೋಷ್ಠಿಯಲ್ಲಿ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಮಾತನಾಡಿದರು. ಭರತಸಿಂಗ್ ವಿಜಾಪೂರ, ಮಾನಸಿಂಗ್ ಕೊಕಟನೂರ, ರಘುರಾಮಸಿಂಗ್ ಹಜೇರಿ, ಅರುಣ ದಡೇದ, ಪ್ರಕಾಶ ಹಜೇರಿ ಇತರರಿದ್ದರು.
Published on

ತಾಳಿಕೋಟೆ: ಹಿಂದುತ್ವದ ಕೇಸರಿ ಮಹಾರಾಣಾ ಪ್ರತಾಪಸಿಂಹ ಅವರ ಮೂರ್ತಿ ಪ್ರತಿಷ್ಠಾಪನೆಗಾಗಿ ವೃತ್ತ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ಅ.27 ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ ಎಂದು ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಈ ಮೊದಲು ನಿಗದಿಪಡಿಸಿರುವ ಜಾಗದಲ್ಲಿ ವೃತ್ತ ನಿರ್ಮಾಣಕ್ಕೆ ರಜಪೂತ ಸಮಾಜದ ವತಿಯಿಂದ ದಿನಾಂಕ ನಿಗದಿಪಡಿಸಿದ್ದೇವೆ. ತಾಳಿಕೋಟೆ ನಗರದ ಎಲ್ಲ ಸರ್ವ ಸಮಾಜ ಬಾಂಧವರ ಸಹಕಾರದಿಂದ ವೃತ್ತ ನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧಪಡಿಸಿಕೊಳ್ಳಲಾಗಿದೆ. ಮೂರ್ತಿ ನಿರ್ಮಾಣ ಕಾರ್ಯ ಪೂರ್ಣವಾಗುವ ಮುಂಚೆ ವೃತ್ತ ನಿರ್ಮಿಸಲು ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ಧಲಿಂಗ ದೇವರು, ಗುಂಡಕನಾಳ ಬೃಹನ್‌ಮಠದ ಗುರುಲಿಂಗ ಶಿವಾಚಾರ್ಯರು, ಕೈಲಾಸಪೇಟೆಯ ಬಸವಪ್ರಭು ದೇವರು, ಭವಾನಿ ಮಂದಿರದ ಅರ್ಚಕ ವೇ.ಭೀಮಾಶಂಕರ ಜೋಶಿ, ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲ್‌ಅಹ್ಮದ ಖಾಜಿ ಸಾನ್ನಿಧ್ಯ ವಹಿಸುವರು. ತಹಸೀಲ್ದಾರ್ ಕೀರ್ತಿ ಚಾಲಕ, ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ಪಿ.ಎಸ್.ಐ. ರಾಮನಗೌಡ ಸಂಕನಾಳ, ಆರ್.ಎಸ್.ಭಂಗಿ ಇತರರು ಭಾಗವಹಿಸುವರು. ಪಟ್ಟಣದ ಸರ್ವ ಸಮಾಜದ ಬಾಂಧವರು ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ರಜಪೂತ ಸಮಾಜದ ಮುಖಂಡರಾದ ಭರತಸಿಂಗ್ ವಿಜಾಪೂರ, ಮಾನಸಿಂಗ್ ಕೊಕಟನೂರ, ರಘುರಾಮಸಿಂಗ್ ಹಜೇರಿ, ಅರುಣ ದಡೇದ, ಪ್ರಕಾಶ ಹಜೇರಿ, ಬಾಬು ಹಜೇರಿ, ಅಮಿತ್‌ಸಿಂಗ್ ಮನಗೂಳಿ, ವಿಜಯಸಿಂಗ್ ಹಜೇರಿ, ಸುರೇಶ ಹಜೇರಿ, ಜೈಸಿಂಗ್ ಮೂಲಿಮನಿ, ವಿಠ್ಠಲಸಿಂಗ್ ಬೇಕಿನಾಳ, ಗೋವಿಂದಸಿಂಗ್ ಮೂಲಿಮನಿ, ಶಿರಸಕುಮಾರಸಿಂಗ್ ಹಜೇರಿ, ರತನಸಿಂಗ್ ಕೊಕಟನೂರ, ಸಂಜಯಸಿಂಗ್ ಹಜೇರಿ, ಅಂಬಾಜಿ ಘೋರ್ಪಡೆ, ವೀರೇಶ ಕಸಬೇಗೌಡರ, ವಿಶ್ವ ರಾಠೋಡ, ವಿಶಾಲ ಕೊಕಟನೂರ, ಮಹಾಂತೇಶ ಮುರಾಳ, ಸೌರಭ ವಿಜಾಪೂರ, ಪ್ರದೀಪ ವಿಜಾಪೂರ, ಕೇಸರಿಸಿಂಗ್ ಹಜೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net