ಬಡಬಗ್ಗರಿಗೆ ದಿನಸಿ ಕಿಟ್ ವಿತರಣೆ

Nadahalli
Published on

ತಾಳಿಕೋಟೆ: ಕರೊನಾ ವೈರಸ್ ತಡೆಗಾಗಿ ಸರ್ಕಾರ ಲಾಕ್‌ಡೌನ್ ಕೈಗೊಂಡ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಮತ ಕ್ಷೇತ್ರದ ಜನರ ಊಟಕ್ಕೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ವೈಯಕ್ತಿಕವಾಗಿ ದಿನಸಿ ಕಿಟ್‌ಗಳನ್ನು ಸಿದ್ಧ್ದಪಡಿಸಲಾಗುತ್ತಿದೆ. ಎರಡು ದಿನಗಳಲ್ಲಿ ಎಲ್ಲ ಬಿಪಿಎಲ್ ಕಾರ್ಡ್‌ದಾರರ ಮನೆ ಮನೆಗೆ ಕಾರ್ಯಕರ್ತರ ಮೂಲಕ ವಿತರಿಸಲಾಗುವುದೆಂದು ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಹೇಳಿದರು.
ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿ ಬಡಬಗ್ಗರ ಎಷ್ಟು ಕುಟುಂಬಗಳ ಲಿಸ್ಟ್ ಮಾಡಲಾಗಿದೆ. ಅದರಲ್ಲಿ ತಾಳಿಕೋಟೆ ಪಟ್ಟಣದ 5 ಸಾವಿರ ಬಿಪಿಎಲ್ ಕಾರ್ಡ್‌ದಾರರಿಗೆ ದಿನಸಿ ಸಾಮಗ್ರಿ ಸಿದ್ಧಪಡಿಸಲಾದ ಕಿಟ್‌ನ್ನು ಅವರ ಮನೆ ಮನೆಗೆ ತಲುಪಿಸುವಂಥ ಕಾರ್ಯ ಆಯಾ ವಾರ್ಡಿನ ಕಾರ್ಯಕರ್ತರು ಮಾಡಲಿದ್ದಾರೆ ಎಂದರು.
ತಹಸೀಲ್ದಾರ್ ಅನೀಲಕುಮಾರ ಢವಳಗಿ, ಪಿಎಸ್‌ಐ ವಸಂತ ಬಂಡಗಾರ, ಮುಖಂಡರಾದ ವಾಸುದೇವ ಹೆಬಸೂರ, ಜಯಸಿಂಗ್ ಮೂಲಿಮನಿ, ಎಚ್.ಎಸ್. ಪಾಟೀಲ, ಪ್ರಕಾಶ ಹಜೇರಿ, ಕಾಶಿನಾಥ ಮುರಾಳ, ಬಿಜ್ಜಾನಲಿ ನೀರಲಗಿ, ಈಶ್ವರ ಹೂಗಾರ, ಶಿವಶಂಕರ ಹಿರೇಮಠ, ಶಿವಾಜಿ ಶೇವಳಕರ, ಸುರೇಶ ಗುಂಡಣ್ಣವರ, ಸಂಗಮೇಶ ಹಾರವಾಳ, ಮಂಜು ಮೈಲೇಶ್ವರ, ಕಕ್ಕು ರಂಗ್ರೇಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net