ಡ್ರೋನ್ ಕ್ಯಾಮರಾದಿಂದ ಲಾಕ್‌ಡೌನ್ ಪರಿಶೀಲನೆ

Dron
Published on

ತಾಳಿಕೋಟೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲಾ ಅವರ ಆದೇಶದಂತೆ ಡಿವೈಎಸ್‌ಪಿ ಶಾಂತವೀರ ಈ. ಸೂಚನೆ ಮೇರೆಗೆ ಕಳುಹಿಸಿದ ಡ್ರೋನ್ ಕ್ಯಾಮರಾ ಪೊಲೀಸ್ ತಂಡದವರು ಪಟ್ಟಣದಲ್ಲಿನ ಲಾಕ್‌ಡೌನ್ ಪರಿಶೀಲನೆ ನಡೆಸಿದರು.
ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ವಸಂತ ಬಂಡಗಾರ ಅವರು ಪೊಲೀಸ್ ಠಾಣಾ ಆವರಣದಿಂದಲೇ ಡ್ರೋನ ಕಾಮರಾಗೆ ಚಾಲನೆ ನೀಡಿ ಮಾತನಾಡಿದರು.
ಡ್ರೋನ್ ಕ್ಯಾಮರಾವು ಕಣ್ಗಾವಲುದಂತೆ ಪಟ್ಟಣದ ಸಂಪೂರ್ಣ ವಿಸ್ತೀರ್ಣ ಸೆರೆಹಿಡಿಯಲಿದೆ. ಪಟ್ಟಣದಲ್ಲಿ ಕೆಲಸವಿಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ತಿರುಗಾಡುವುದು ಕಂಡುಬಂದರೂ ಅದನ್ನು ಸೆರೆ ಹಿಡಿಯಲಾಗುತ್ತದೆ. ಅಂತವರ ಮೇಲೆ ಕೇಸ್ ದಾಖಲಿಸಿ ಅವರ ಮೇಲೆ ಕ್ರಮಕ್ಕೆ ಮುಂದಾಗಲಾಗುತ್ತದೆ. ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾದ ಲಾಕ್‌ಡೌನ್ ಪರಿಸ್ಥಿತಿಯನ್ನು ನಮ್ಮ ಇಲಾಖೆ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ವೀಕ್ಷಿಸಲಿದ್ದಾರೆ ಎಂದರು.
ತಂಡದ ಮುಖ್ಯಸ್ಥ ಎಂ.ಬಿ. ಕಟ್ಟಿಮನಿ, ಪಿಎಸ್‌ಐ ವಸಂತ ಬಂಡಗಾರ, ಸಿಬ್ಬಂದಿಗಳಾದ ಎಎಸ್‌ಐ ಆರ್.ಎಸ್. ಬಂಗಿ, ಬಿ.ಜಿ. ಬಲಕಲ್ಲ, ಗುರು ನಾಯಕ, ಎಂ.ಎಲ್. ಪಟ್ಟೇದ, ಶಿವು ಹಾಳಗೊಡೆ, ಗಿರೀಶ ಚಲವಾದಿ, ಸಂಗಮೇಶ ಚಲವಾದಿ, ಆರ್.ಎಸ್. ವಡೆಯರ, ಮಹೇಶ ದೊಡಮನಿ, ಭೀಮನಗೌಡ ನಾಡಗೌಡ, ಎಂ.ಎ. ಅವಟಿ, ಎಸ್.ವಿ. ಮಠ, ಪಿ.ಎಂ. ಗಣತಿ, ಪಿ.ಎಸ್. ದೊಡಮನಿ, ಸೋಮು ರಾಠೋಡ, ಕೊಟ್ಟೆಪ್ಪ ಮಾದರ, ಎಸ್.ವಿ. ಬಿರಾದಾರ, ಬಿ.ವಿ. ಹಳ್ಳೂರ, ವೈ.ವಿ. ಹದಗಲ್ಲ, ಎಸ್.ಎಂ. ಕಾರಜೋಳ, ಎಸ್.ಬಿ. ಬಗಲಿ, ಎಸ್.ಡಿ. ಕುಂಟೋಜಿ, ವೈ.ವಿ. ಬನಸೋಡೆ, ಚಾಂದ ವಠಾರ, ಎನ್.ಎಂ. ಹಿರೇಮಠ, ಕೆ.ವೈ. ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net