

ತಾಲೂಕಿನ ಗುಂಡಕನಾಳ ಗ್ರಾಮದ ರೈತ, ಜಮೀನಿನ ಮಾಲೀಕ ಶರಣಗೌಡ ಪಾಟೀಲ ಎಂಬುವವರ ತೊಗರಿ ಬಿತ್ತಿದ 23 ಎಕರೆ ಜಮೀನನ್ನು 11 ಗಂಟೆಯಲ್ಲಿ ಸಿದ್ದಯ್ಯ ಬಾನ್ಯಾಳಮಠ ಎಂಬುವವರ ಜೋಡೆತ್ತು ಹರಗಿ ಸಾಧನೆ ಮಾಡಿವೆ.
ಬುಧವಾರ ನಸುಕಿನ ಜಾವ 5 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 23 ಎಕರೆ ತೊಗರಿ ಜಮೀನಿನ ಕಸವನ್ನು ಹರಗಿ ಎತ್ತುಗಳು ಸ್ವಚ್ಛ ಮಾಡಿವೆ. ಜೋಡೆತ್ತುಗಳಿಗೆ ರೈತರು ಗುಲಾಲ್ ಎರಚಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ರೈತ ಮುಖಂಡರಾದ ವಿಶ್ವನಾಥರಡ್ಡಿ ದೇಸಾಯಿ, ಸಂಗನಗೌಡ ಮೇಟಿ, ಸಿದ್ದಯ್ಯ ಮಠ, ನಿಂಗನಗೌಡ ದೇಸಾಯಿ, ಶರಣಗೌಡ ಬಿರಾದಾರ, ಬಸವಂತರಾಯ ಲಕ್ಕುಂಡಿ, ಆನಂದ ದೇಸಾಯಿ, ಅರುಣ ಗಬಸಾವಳಗಿ, ಸಂಗನಗೌಡ ಪಾಟೀಲ, ಆಕಾಶ ಹಳಿಮನಿ, ಮಲ್ಲನಗೌಡ ಹೊಸಮನಿ, ದೇಸು ದೇಸಾಯಿ ಇತರರಿದ್ದರು.