

ಸಾಗರ: ಸರ್ಕಾರಿ ಶಾಲೆಗಳಿಗೆ ದಾನಿಗಳು ಹೆಚ್ಚಿನ ಸಹಕಾರ ನೀಡಿ ಉನ್ನತಿಗೆ ಸಹಕರಿಸಬೇಕು ಎಂದು ಹಿರಿಯ ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್ ಹೇಳಿದರು.
ತಾಲೂಕಿನ ಯಡಜಿಗಳೇಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅರವಿಂದ ಟ್ರಸ್ಟ್ನಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಿ ಮಾತನಾಡಿದರು.
ಸತತ ಪರಿಶ್ರಮದಿಂದ ಉತ್ತಮ -Àಲಿತಾಂಶ ಪಡೆಯಲು ಸಾಧ್ಯ. ಪ್ರತಿಯೊಬ್ಬರಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪ್ರಾಥಮಿಕ ಹಂತದಲ್ಲಿ ಮಾಡಬೇಕಾಗಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ ಮೇಲೆ ಸಮಾಜದ ಋಣ ತೀರಿಸಬೇಕು. ನಾವು ಓದಿದ ಶಾಲೆಗೆ ದುಡಿಮೆಯ ಸ್ವಲ್ಪ ಹಣವನ್ನು ಶಾಲೆಗೆ ವಿನಿಯೋಗಿಸಬೇಕು. ಆಗ ನಮ್ಮ ಭಾಗದ ಶಾಲೆಗಳು ಕೂಡ ಯಶಸ್ಸಿನತ್ತ ಮುನ್ನಡೆಯುತ್ತವೆ ಎಂದರು.
ಶಿಕ್ಷಣ ಸಂಯೋಜಕ ವಿ.ಟಿ.ಸ್ವಾಮಿ ಮಾತನಾಡಿ, ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದಾಗ ಗುಣಾತ್ಮಕ -Àಲಿತಾಂಶ ನಿರೀಕ್ಷಿಸಬಹುದು. ಬದಲಾದ ದಿನಗಳಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಬಾಹ್ಯವಾಗಿ ಹೆಚ್ಚಿನ ಬೆಂಬಲ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ. ಅರವಿಂದ ಟ್ರಸ್ಟ್ ಮಾಡುತ್ತಿರುವ ಶೈಕ್ಷಣಿಕ ಸೇವೆ ಅನುಕರಣೀಯ. ಪ್ರತಿಯೊಂದು ಸರ್ಕಾರಿ ಶಾಲೆಗಳಿಗೂ ಈ ರೀತಿಯ ಸಹಕಾರ ನೀಡುವ ಮನೋಪ್ರವೃತ್ತಿ ಹೆಚ್ಚಬೇಕು ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್ ದೊಂಬೆ, ಪ್ರಮುಖರಾದ ಎಂ.ಎಸ್.ರಮೇಶ್, ವರುಣ್ ಭಟ್, ಕೌಟಿಲ್ಯ, ಸುಮಾ, ನಾಗರಾಜ್, ಎಚ್.ಕೆ.ಪರಮಾತ್ಮ , ತಿಮ್ಮಣ್ಣ ಭಟ್, ನಿರ್ಮಲಾ, ಕಾವ್ಯಾ, ವಿದ್ಯಾ, ನಯನಾ, ಕೃಷ್ಣಮೂರ್ತಿ, ಸುರೇಶ್, ರಾಮಪ್ಪ, ಸೀಮಾ ಹೆಗಡೆ, ಸತ್ಯಪ್ಪ, ಗೌರಮ್ಮ, ಸತ್ಯನಾರಾಯಣ ಇತರರಿದ್ದರು.