ಪ್ರತಿಭೆ ಅನಾವರಣಕ್ಕೆ ಕಾರಂಜಿ ಉತ್ತಮ ವೇದಿಕೆ

pratibha karanji
ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಎಸ್‌ಡಿಎಂ ಶಾಲೆಯಲ್ಲಿ ಆಯೋಜಿಸಲಾಗಿದ್ದ ಗೆಣಿಕೆಹಾಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಛದ್ಮವೇಶ ಜನರ ಗಮನಸೆಳೆಯಿತು.
Published on

ಕುರುಗೋಡು: ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಾಲೆಗಳಲ್ಲಿ ನಡೆಸುವ ಪ್ರತಿಭಾ ಕಾರಂಜಿ ವೇದಿಕೆ ತುಂಬಾ ಸಹಕಾರಿ ಎಂದು ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಗುಂಡಪ್ಪನವರ ನಾಗರಾಜ ಹೇಳಿದರು.

ತಾಲೂಕಿನ ಬಾದನಹಟ್ಟಿಯ ಎಸ್‌ಡಿಎಂ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗೆಣಿಕೆಹಾಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಕಲೆ, ಸಾಹಿತ್ಯ ಇತರೆ ಹವ್ಯಾಸಗಳಲ್ಲಿ ಆಸಕ್ತಿ ಇರುತ್ತದೆ. ಅದನ್ನು ಪ್ರದರ್ಶಿಸಲು ಹಾಗೂ ಹೊರ ತರಲು ಸರ್ಕಾರ ಶಾಲಾ ಮಟ್ಟಗಳಲ್ಲಿ ರೂಪಿಸಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಉಪಯೋಗವಾಗಿವೆ ಎಂದರು.

ಸಿಆರ್‌ಪಿ ಬಿ.ಬಸವರಾಜ ಮಾತನಾಡಿ, ಶಿಕ್ಷಕರು ಕೇವಲ ಭೋದನೆಗೆ ಸೀಮಿತವಾಗದೆ ಮಕ್ಕಳಲ್ಲಿರುವ ಇತರ ವಿಷಯಗಳನ್ನು ಹೊರೆ ತರಲು ಪ್ರಯತ್ನಿಸಬೇಕು.

ಮಕ್ಕಳಲ್ಲಿ ವಿದ್ಯೆಯ ಜತೆಗೆ ಕಲಿಕಾ ಆಸಕ್ತಿ ಕೂಡ ಮುಖ್ಯ. ಮುಂದಿನ ದಿನಗಳಲ್ಲಿ ಉತ್ತಮ ಸಾಧನೆಗೈಯುವ ಮಕ್ಕಳನ್ನು ಪ್ರಾರಂಭದಲ್ಲೆ ಗುರುತಿಸಿ ಪ್ರೋತ್ಸಾಹ ನೀಡಿ ಎಂದರು. ಕಾರ್ಯಕ್ರಮದಲ್ಲಿ 18 ಶಾಲೆಗಳಿಂದ 500 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶಿಕ್ಷಕರಾದ ಸಿ.ಕೆ.ಭೀಮಪ್ಪ, ಶರಣಬಸವ, ತುಕಾರಾಂ ಗೊರವ, ನಾಗರಾಜ ಮಸೂತಿ, ಸಣ್ಣ ಮಾರೆಣ್ಣ, ಶೆಕ್ಷಾವಲಿ, ಎಚ್.ನಾಗರಾಜ, ಶಿವಾನಂದ ಪಾಟೀಲ್, ಅನಂತಮೂರ್ತಿ, ಕಾಸೀಸಾಬ್, ಚಿನ್ನಬೋರಾನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net