ಪ್ರತಿಭೆ ಪ್ರೋತ್ಸಾಹಿಸಲು ಸದಾ ಸಿದ್ಧ

web4
ಚನ್ನಮ್ಮ ಕಿತ್ತೂರ ಪಟ್ಟಣದ ಎಸ್.ವಿ.ಜಿ. ಹೊಸ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿಯನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ವಸಂತ ಭಜಂತ್ರಿ, ಗಾಯತ್ರಿ ಅಜ್ಜನ್ನವರ, ಮಹೇಶ ಹೆಗಡೆ ಇದ್ದರು.
Published on

ಚನ್ನಮ್ಮ ಕಿತ್ತೂರು: ಪ್ರತಿಭೆ ಗುರುತಿಸಿ ಉತ್ತೇಜನ ನೀಡುವ ಕಾರ್ಯವನ್ನು ಶಿಕ್ಷಕರು ಹಾಗೂ ಪಾಲಕರು ಮಾಡಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಪಟ್ಟಣದ ಎಸ್.ವಿ.ಜಿ. ಹೊಸ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿ, ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ನೀವು ಮಾಡಿ, ಅವರಿಗೆ ಬೇಕಾಗುವ ಸಹಾಯ ಸಹಕಾರ ನೀಡಲು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು. ಪ್ರೌಢಶಾಲೆ ಚೇರ್ಮನ್ ವಸಂತ ಭಜಂತ್ರಿ ಮಾತನಾಡಿ, ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದರು.

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅಜ್ಜನ್ನವರ, ಶಿಕ್ಷಣ ಸಂಯೋಜಕ ಮಹೇಶ ಹೆಗಡೆ, ಈಶ್ವರ ಉಪರಿ, ಮೀನಾಕ್ಷಿ ಸುಡಿ, ಮುಖ್ಯ ಶಿಕ್ಷಕ ಶ್ರೀನಿವಾಸ ಭಜಂತ್ರಿ, ಡಾ.ಗಜಾನಂದ ಸೊಗಲನ್ನವರ, ಶೀರಿನಬಾನು ಸೌದಾಗರ, ಸಿದ್ದಣ್ಣ ಹುಲಮನಿ, ಎಂ.ಎಸ್.ಕಲ್ಮಠ, ಸಿ.ಎಸ್.ಪಾಟೀಲ, ರಾಘವೇಂದ್ರ ಮುಂಡೆವಾಡಿ, ಮೃತ್ಯುಂಜಯ ಕಲ್ಮಠ, ಮಡಿವಾಳಯ್ಯ ಗುರುವಯ್ಯನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net