

ಬೈಲಹೊಂಗಲ: ಸಮಾಜದಲ್ಲಿನ ಪ್ರತಿಭಾವಂತರಲ್ಲಿ ಹುದುಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರಿಂದ ಇತರರಿಗೆ ಸಾಧನೆ ಪ್ರೇರಣೆಯಾಗುತ್ತದೆ ಎಂದು ಅಬಕಾರಿ ನಿರೀಕ ಶ್ರೀಶೈಲ ಅಕ್ಕಿ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಣ ಸಂಸ್ಥೆಯ ಜಿ.ಜಿ.ದೇಶನೂರ ಕಲಾ, ಬಿ.ಎಂ.ಪಾಟೀಲ ವಾಣಿಜ್ಯ ಹಾಗೂ ಎಸ್.ವಿ.ಸಾಧುನವರ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶೈಣಿಕ ವರ್ಷದ ಕ್ರೀಡಾ ಮತ್ತು ಸಾಂಸತಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಂದ ಈ ಮಹಾವಿದ್ಯಾಲಯ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಸಾಧನೆಗೈದ ವಿದ್ಯಾರ್ಥಿಗಳಿಗೆ ಕೆಆರ್ಸಿಇ ಸಂಸ್ಥೆ ನಿರ್ದೇಶಕ ಶಿರೀಶ ತುಡವೇಕರ ಬಹುಮಾನ ವಿತರಿಸಿದರು.
ಸ್ಕೌಟ್ಸ್ ಮತ್ತು ಗೆಡ್ಸ್ ಅಧಿಕಾರಿ ಪ್ರೊ.ಎಂ.ಸಿ.ದೇಶನೂರ, ಕ್ರೀಡಾ ಹಾಗೂ ಎನ್ಸಿಸಿ ಅಧಿ ಕಾರಿ ಕ್ಯಾಪ್ಟನ್ ಡಿ.ಎಂ.ಏಣಗಿ, ಮಹಿಳಾ ಸಬಲೀಕರಣ ಟಕದ ಗೌತಮಿ ಬಲಿಮನೆ, ಎನ್ಎಸ್ಎಸ್ ಟಕದ ಡಾ.ಎಲ್.ಬಿ.ಕದಮ, ಸಾಂಸತಿಕ ಟಕದ ಎಸ್.ಎನ್.ನೀಲನ್ನವರ ಇದ್ದರು.
2024&25ನೆಯ ಸಾಲಿನ ಅತ್ಯುತ್ತಮ ವಿದ್ಯಾರ್ಥಿಯಾಗಿ ಸಂಪತಕುಮಾರ ಬಾಗನವರ, ಪ್ರಥಮ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ವೆಷ್ಣವಿ ವಡೆಯರ, ದ್ವೀತಿಯ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಅತಾ ಅಂಬಲಿ ಪ್ರಶಸ್ತಿ ಪಡೆದರು. ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಆಕಾಶ ಸಂಗೆಯನವರ ಪಡೆದರು. ಕೆಆರ್ಸಿಇ ಸಂಸ್ಥೆಯ ನಿರ್ದೇಶಕ ವೀರಣ್ಣ ಬೆಲ್ಲದ ಅಧ್ಯತೆ ವಹಿಸಿದ್ದರು. ಪ್ರೊ.ಯು.ಬಿ. ಹುನಗುಂದ, ಪ್ರೊ.ಮಾರುತಿ ಎನ್. ಎಸ್., ಪ್ರೊ.ವಿ. ಎಸ್. ಗಣಾಚಾರಿ, ಲಕ್ಷಿ$್ಮ ಕಡತಕೋಳ ಇತರರು ಇದ್ದರು.
ಕ್ರೀಡಾ ಮತ್ತು ಸಾಂಸತಿಕ ವಿಭಾಗದ ಉಪಾಧ್ಯ ಪ್ರೊ.ಎಲ್.ಆರ್.ದಿಂಡಲಕೊಪ್ಪ ಸ್ವಾಗತಿಸಿದರು. ಐಕ್ಯೂಎಸಿ ಕೋ ಆರ್ಡಿನೇಟರ್ ಡಾ. ಎನ್.ಕೆ. ಏಣಗಿ ವಂದಿಸಿದರು. ಪ್ರೊ. ಎಂ.ಐ.ಕಾದ್ರೊಳ್ಳಿ ನಿರೂಪಿಸಿದರು.