ವಿದ್ಯಾರ್ಥಿಗಳು ಗುರಿಯತ್ತ ಚಿತ್ತ ಹರಿಸಿ

dj hyr knk
Published on

ಹಿರಿಯೂರು: ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಗುರಿ ಮುಟ್ಟುವ ಕಡೆ ಚಿತ್ತ ಹರಿಸಬೇಕು ಎಂದು ಕನ್ಯಕ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷೆ ಎನ್.ಆರ್. ಜಯಲಕ್ಷ್ಮಿ ಹೇಳಿದರು.

ನಗರದ ಕನ್ಯಕ ಸೌಹಾರ್ದ ಸಹಕಾರಿ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ-ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಒಳ್ಳೆಯ ಗುಣದಿಂದ ಉತ್ತಮ ವ್ಯಕ್ತಿತ್ವ ರೂಪು ತಳೆಯಲಿದೆ. ನಂಬಿಕೆ ಆತ್ಮವಿಶ್ವಾಸ ಇದ್ದಾಗ ಗುರಿ ಸಾಧಿಸಲು ಸಾಧ್ಯವಾಗಲಿದೆ ಎಂದರು.

ಮಕ್ಕಳಲ್ಲಿ ಮಾನವೀಯ-ನೈತಿಕ ಮೌಲ್ಯ ಬಿತ್ತಿ, ನಾಯಕತ್ವ ಗುಣ ಬೆಳೆಸಬೇಕು. ವಿಶ್ವ ಮಾನವನಾಗಿ ಬೆಳೆಯಲು ಒತ್ತು ನೀಡಬೇಕು ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ, ಪಿಯು, ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಈ.ರಮೇಶ್ ಬಾಬು, ನಿರ್ದೇಶಕ ಅನಂತಕುಮಾರ್, ತಿಪ್ಪೇಸ್ವಾಮಿ, ಶ್ರೀನಿವಾಸ ಶ್ರೇಷ್ಠಿ, ಮಂಜುನಾಥ, ಅರುಣ್‌ಕುಮಾರ್, ನಾಗರಾಜ್,

ಹರ್ಷ, ನವೀನ್, ಕಿರಣ್‌ಕುಮಾರ್, ಆಂಜನೇಯ, ತಿಪ್ಪೇರುದ್ರಣ್ಣ, ಕೃಷ್ಣನಾಯ್ಕ, ಮಧಸೂದನ್, ಲತಾ. ಜಿ.ಬಿ.ಮಂಜುನಾಥ್, ಅಮರೇಶ್ವರ್,

ವ್ಯವಸ್ಥಾಪಕ ಎಸ್.ರಾಮಕೃಷ್ಣ, ನವೀನ್ ಕುಮಾರ್, ಜಯದೇವಯ್ಯ, ಸುಬ್ರಮಣಿ ಪಿ.ಎಸ್.ಶಿಲ್ಪಾ, ಸುಧೀಂದ್ರ, ನರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net