ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಡಗಿದೆ

17 ckm 2
ಚಿಕ್ಕಮಗಳೂರಿನ ಜ್ಯೋತಿನಗರ ಸಮೀಪ ಮಲೆನಾಡು ವಿದ್ಯಾಸಂಸ್ಥೆಯ ಶ್ರೀಮತಿ ಸೀತಮ್ಮ ಸರಾಫ್ ರಾಮಚಂದ್ರ ರಾವ್ ಪ್ರಾಯೋಗಿಕ ಪ್ರೌಢಶಾಲೆಯ ೨೦೨೪-೨೫ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಹಕಾರ ಸಂಘಗಳ ಉಪ ನಿಬಂಧಕಿ ಡಿ. ಎಸ್.ತೇಜಸ್ವಿನಿ ಉದ್ಘಾಟಿಸಿದರು. ಡಾ.ಡಿ.ಎಲ್.ವಿಜಯಕುಮಾರ್, ಎನ್.ಕೇಶವಮೂರ್ತಿ, ಎಂ.ವಿ.ಷಡಾಕ್ಷರಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಭವಿಷ್ಯದಲ್ಲಿ ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಲು ವಿದ್ಯಾರ್ಥಿ ದೆಸೆಯಿಂದಲೇ ಗುರಿ ಹೊಂದಿರಬೇಕು. ವಿದ್ಯಾಭ್ಯಾಸದಲ್ಲಿ ಕಠಿಣ ಪರಿಶ್ರಮವಿದ್ದರೆ ಮಾತ್ರ ಭವಿಷ್ಯದ ಕನಸನ್ನು ಸಾಕಾರಗೊಳಿಸಲು ಸಾಧ್ಯ ಎಂದು ಸಹಕಾರ ಸಂಘಗಳ ಉಪ ನಿಬಂಧಕಿ ಡಿ. ಎಸ್.ತೇಜಸ್ವಿನಿ ತಿಳಿಸಿದರು.

ನಗರದ ಜ್ಯೋತಿನಗರ ಸಮೀಪ ಮಲೆನಾಡು ವಿದ್ಯಾಸಂಸ್ಥೆಯ ಶ್ರೀಮತಿ ಸೀತಮ್ಮ ಸರಾಫ್ ರಾಮಚಂದ್ರ ರಾವ್ ಪ್ರಾಯೋಗಿಕ ಪ್ರೌಢಶಾಲೆಯ ೨೦೨೪-೨೫ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯುವಸಮೂಹ ಆನ್‌ಲೈನ್‌ನನ್ನು ಕೇವಲ ಮನರಂಜನೆಯಾಗಿ ಬಳಸಿಕೊಳ್ಳುತ್ತಿದೆ. ಅವುಗಳಿಂದ ವಿದ್ಯಾರ್ಜನೆಗೆ ಸೇರಿದಂತೆ ಆಂಗ್ಲಭಾಷೆಗೆ ಕಲಿಕೆಗೆ ಬಹಳಷ್ಟು ಉಪಯುಕ್ತ ವಾಗಲಿದೆ. ಇದನ್ನರಿತು ವಿದ್ಯಾರ್ಥಿಗಳು ಪಠ್ಯಕ್ಕೆ ಪೂರಕವಾಗುವ ವಿಷಯಗಳನ್ನು ಜಾಲತಾಣದಲ್ಲಿ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಲ್ಲಿ ಒಂದಲ್ಲೊAದು ಪ್ರತಿಭೆ ಅಡಗಿರುತ್ತದೆ. ಅವುಗಳನ್ನು ಗುರುತಿಸುವ ಕಾರ್ಯ ಶಿಕ್ಷಕರು ಮಾಡಬೇಕು. ವಿದ್ಯಾಕ್ಷೇತ್ರದಲ್ಲೇ ಕೆಲವು ಮಕ್ಕಳಿಗೆ ಐಎಎಸ್, ಕೆಎಎಸ್, ಐಪಿಎಸ್ ಅಥವಾ ವೈದ್ಯ, ವಕೀಲರಾಗಬೇಕೆಂಬ ಹಂಬಲವಿರುತ್ತದೆ. ಇವುಗಳನ್ನು ವಿದ್ಯಾರ್ಥಿಗಳು ಬಾಲ್ಯದಿಂದಲೇ ನಿರ್ಧರಿಸಿದರೆ ಗುರಿ ತಲುಪಲು ಸಾಧ್ಯ ಎಂದು ತಿಳಿಸಿದರು.
ಪ್ರತಿದಿನವು ಮಕ್ಕಳು ಖುಷಿಯಿಂದ ಜೀವಿಸುವುದನ್ನು ರೂಢಿಸಿಕೊಳ್ಳಬೇಕು. ವಿದ್ಯಾಭ್ಯಾಸದಲ್ಲಿ ಅಥವಾ ಪರೀಕ್ಷಾ ಸಮಯದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗದೇ ಸುಲಭವೆಂದು ತಿಳಿಸಿದಾಗ ಮಾತ್ರ ಯಶಸ್ಸು ಗಳಿಸಬಹುದು. ಅನೇಕ ಸಾಧಕರು ವಿವಿಧ ಕ್ಷೇತ್ರದ ಸಾಧನೆಗೈಯಲು ಕಾರಣ ಬದುಕಿನಲ್ಲಿ ಅಳವಡಿಸಿಕೊಂಡ ಸುಲಭ ನಿಯಮಗಳೇ ಎಂದರು.
ಎAಇಎಸ್ ಗೌರವ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಜೀವನದಲ್ಲಿ ಗುರಿಯಿಲ್ಲದವರು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಲು ಸಾಧ್ಯವಿಲ್ಲ. ಬಾಲ್ಯದಿಂದಲೇ ಆಸಕ್ತಿ ಹೊಂದಿರುವ ವಿಷಯದಲ್ಲಿ ಶಿಸ್ತು, ಸಂಯಮ, ಸಮಯ ವ್ಯರ್ಥಗೊಳಿಸದೇ ಒಂದು ನಿರ್ದಿಷ್ಟ ಗುರಿಗೆ ಸೀಮಿತರಾದರೆ ಸಮಾಜದಲ್ಲಿ ಉತ್ತಮ ನಾಗರೀಕರಾಗಬಹುದು ಎಂದು ಹೇಳಿದರು.
ಇದೇ ವೇಳೆ ಶೈಕ್ಷಣಿಕ ಸಾಲಿನ ೮, ೯ ಹಾಗೂ ೧೦ನೇ ತರಗತಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ತದನಂತರ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ವಿ.ಷಡಕ್ಷಾರಿ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಎಂಇಎಸ್ ಅಧ್ಯಕ್ಷ ಎನ್.ಕೇಶವಮೂರ್ತಿ, ಶಾಲೆಯ ಮುಖ್ಯ ಶಿಕ್ಷಕ ಅರ್ಜುನ್ ಪವಾÀರ್, ವಿದ್ಯಾರ್ಥಿ ಸಂಘದ ಮೇಲ್ವಿಚಾರಕ ಸತೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net