

ಗೊಳಸಂಗಿ: ಪ್ರತಿಭೆಗೆ ಸಿರಿತನ, ಬಡತನದ ಹಂಗು ಇಲ್ಲ. ಜಾತಿಬೇಧದ ಬೇಲಿಯೂ ಇಲ್ಲ. ಯಾವ ವಿದ್ಯಾರ್ಥಿ ಕಷ್ಟಪಡದೇ ಇಷ್ಟಪಟ್ಟು ಸತತ ಪ್ರಯತ್ನ, ನಿರಂತರ ಅಧ್ಯಯನ ಮಾಡುವನೊ ಅಂಥವನ ನೆರಳಿನಂತೆ ಅದು ಹಿಂಬಾಲಿಸುತ್ತದೆ ಎಂದು ಸ್ಥಳೀಯ ಎಸ್‌ಆರ್‌ಎಡಿ ಪ್ರೌಢಶಾಲೆಯ ಶಿಕ್ಷಕ ಎಸ್.ಕೆ. ಗುಳೇದಗುಡ್ಡ ಹೇಳಿದರು.
ಗ್ರಾಮದ ವಿಶ್ವಕರ್ಮ ಸಮಾಜದಿಂದ ಕಳೆದ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿ ಪಾಸಾದ ವೈಷ್ಣವಿ ಮಲ್ಲಾರಿ ಪವಾರ, ವೈಷ್ಣವಿ ರಮೇಶ ನೀಲವಾಣಿ, ಸಾಗರ ಚಂದ್ರಶೇಖರ ಬಡಿಗೇರ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಕೆಪಿಎಸ್ ವ್ಯವಸ್ಥಾಪಕ ರಾಘವೇಂದ್ರಸ್ವಾಮಿ ದೇವಾಂಗಮಠ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯ ವರವಿದ್ದಂತೆ. ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ವ್ಯರ್ಥ ಕಾಲಹರಣ ಮಾಡದೆ ಹೆತ್ತವರ ಕನಸು, ಶಿಕ್ಷಕರ ಶ್ರಮ ಸಾರ್ಥಕಗೊಳಿಸಿ ನಿಮ್ಮ ನಾಳೆಯ ಬಾಳನ್ನು ಹಸನಾಗಿಸಿಕೊಳ್ಳಬೇಕು ಎಂದರು.
ದೇವಾಂಗಮಠದ ಶ್ರೀಧರಸ್ವಾಮಿ, ಚಿದಾನಂದಸ್ವಾಮಿ, ವಿಠ್ಠಲಸ್ವಾಮಿ, ದೇವಾಂಗಸ್ವಾಮಿ, ಅಶೋಕಸ್ವಾಮಿ, ಹರ್ಷಸ್ವಾಮಿ, ಪ್ರಮುಖರಾದ ದುಂಡಪ್ಪ ಕಾಳಗಿ, ಡಾ. ಮಲ್ಲಾರಿ ಪವಾರ, ರಾಜೇಂದ್ರ ಬಡಿಗೇರ, ಪ್ರಸಾದ ಪತ್ತಾರ, ದೇವಪ್ಪ ಬಡಿಗೇರ, ಶ್ರೀಶೈಲ ಬಡಿಗೇರ, ರವಿ ಬಡಿಗೇರ, ದ್ರಾಕ್ಷಾಯಣಿ ಹುಲ್ಯಾಳ, ಸುಮಾ ಪವಾರ ಇತರರಿದ್ದರು.