ಸೋಲು-ಗೆಲುವಿಗಿಂತ ಪ್ರತಿಭೆ ಪ್ರದರ್ಶನ ಮುಖ್ಯ

21RAYABAG1
Published on

ರಾಯಬಾಗ: ಕ್ರೀಡಾಪಟುಗಳಿಗೆ ಸೋಲು-ಗೆಲುವಿಗಿಂತ ಪ್ರತಿಭೆ ಪ್ರದರ್ಶಿಸುವುದು ತುಂಬ ಮುಖ್ಯವಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ೨೦೨೫-೨೬ನೇ ಸಾಲಿನ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಸತತ ಪರಿಶ್ರಮದಿಂದ ಯಶಸ್ಸು ಸಾಧಿಸಿ ಕ್ರೀಡೆಗಳಲ್ಲಿ ದಾಖಲೆ ಸೃಷ್ಟಿಸಬಹುದಾಗಿದೆ ಎಂದರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಆರ್.ಟಿ.ದಾಸರ, ಎಸ್.ಎಂ.ಟೊನ್ನೆ, ಬಿ.ಕೆ.ಹಳ್ಳಿಮನಿ, ವ್ಹೀಲ್‌ಚೇರ ಇಂಟರನ್ಯಾಷನಲ್ ಕ್ರಿಕೆಟ್ ಕ್ರೀಡಾಪಟು ಸುನೀಲ ಪಾಟೀಲ ಅವರನ್ನು ಸನ್ಮಾನಿಸಿದರು.

ಪಪಂ ಅಧ್ಯಕ್ಷ ಅಶೋಕ ಅಂಗಡಿ, ಬಿಇಒ ಬಸವರಾಜಪ್ಪ ಆರ್., ರಾಜೇಂದ್ರ ನಾಯಿಕ, ಬಿಆರ್‌ಸಿ ಬಸವರಾಜ ಕಾಂಬಳೆ, ಶಿವುಕುಮಾರ ತಮ್ಮನ್ನವರ, ಎಸ್.ಎನ್.ಬುರ್ಲಟ್ಟಿ, ಝೆಡ್.ಆರ್.ಮುಲ್ಲಾ, ಎಸ್.ಎ.ಅಂದಾನಿ, ವಿ.ಡಿ.ಉಪಾಧ್ಯೆ, ಎಂ.ಡಿ.ಹುಲ್ಲೆನ್ನವರ, ಬಿ.ಎಸ್.ಮುತ್ತೂರ, ಎಸ್.ಬಿ.ಅರಗೆ, ಆರ್.ಟಿ.ಅರಬಳ್ಳಿ, ದೈಹಿಕ ಶಿಕ್ಷಣ ಪರಿವೀಕ್ಷಕ ಮಹಾವೀರ ಜಿರಗ್ಯಾಳ, ಎಲ್.ಬಿ.ಬಂಡಗಾರ, ಎಂ.ಡಿ.ಬನಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net