ಪ್ರತಿಭೆ ಅಂತರಾತ್ಮದ ಶಕ್ತಿ

naregal
Published on

ನರೇಗಲ್ಲ: ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆ ಅಂತರಾತ್ಮದ ಶಕ್ತಿಯಾಗಿದೆ. ಅದನ್ನು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಾದರಪಡಿಸಬೇಕು. ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಯ ಮೂಲಕವೂ ಸಾಧನೆ ಮಾಡಬಹುದು ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ರವೀಂದ್ರನಾಥ ದಂಡಿನ ಹೇಳಿದರು.

ಪಟ್ಟಣದ ಕೆಎಸ್‌ಎಸ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಕೆಎಸ್‌ಎಸ್ ಪ್ರೌಢಶಾಲೆ ನರೇಗಲ್ಲ ಸಂಯುಕ್ತ ಆಶ್ರಯದಲ್ಲಿ ಗರುವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಕಾಲೇಜು ಮತ್ತು ಪ್ರೌಢಶಾಲೆಯ ವಿವಿಧ ಸಾಂಘಿಕ ಚಟುವಟಿಕೆ ಉದ್ಘಾಟನೆ ಹಾಗೂ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲಿಕಾ ಹಂತದಲ್ಲಿ ಏನನ್ನಾದರೂ ಸಾಧಿಸುವಂತಹ ವಯಸ್ಸಿರುತ್ತದೆ. ಇಂತಹ ಅಮೂಲ್ಯವಯಸ್ಸು ಮತ್ತು ಸಮಯವನ್ನು ಸಾಧನೆಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಗದೀಶ ಸಂಕನಗೌಡ್ರ, ರಘುನಾಥ ಕೊಂಡಿ, ಉಪನ್ಯಾಸಕ ಎಸ್.ಎಸ್. ಹೊನ್ನೂರ, ಪ್ರಾಚಾರ್ಯ ಎ.ಎ. ನದಾಫ್, ಮುಖ್ಯೋಪಾಧ್ಯಾಯ ಪಿ.ಎನ್. ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net