ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ: ಶಾಸಕ ಗೋಪಾಲಕೃಷ್ಣ ಬೇಳೂರು

8-ANP-P1 BELURU CHANDRAYANA SELFY (4)
Published on

ಆನಂದಪುರ: ಮಕ್ಕಳಿಗೆ ಕಲೆ-ಸಂಸ್ಕೃತಿಗಳ ಪರಿಚಯದ ಜತೆ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರೌಢಶಾಲೆ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾನವ ಚಂದ್ರಯಾನ ಮಿಷನ್-4 ಸೆಲಿ ಕಾರ್ನರ್ ಫೋಸ್ ಕೊಟ್ಟು ಚಾಲನೆ ನೀಡಿ ಮಾತನಾಡಿದರು.
ವೈಜ್ಞಾನಿಕ ಸಂಶೋಧನೆ, ಅಧ್ಯಯನ ಮತ್ತು ಪರಿಕಲ್ಪನೆಗಳ ಬಗ್ಗೆ ಮುಂದಿನ ೫೦ ವರ್ಷದ ನಂತರ ಸಂಭವಿಸುವ ಬೆಳವಣಿಗೆಯ ದೃಷ್ಠಿಕೋನ ಮಕ್ಕಳಲ್ಲಿ ಬೆಳೆಯಬೇಕು. ಆಗ ಮಾತ್ರ ಅವರು ಮಹಾನ್ ಸಾಧಕರಾಗಿ ಬೆಳೆಯಲು ಸಾಧ್ಯ ಎಂದರು.
ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್‌ಕುಮಾರ್ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರ ತರಲು ಶಾಲೆಗಳಲ್ಲಿ ವೈವಿಧ್ಯಮಯ ಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಆನAದಪುರ ಗ್ರಾಪಂ ಉಪಾಧ್ಯಕ್ಷೆ ರೂಪಾ ನಾಗರಾಜ್, ಆಚಾಪುರ ಗ್ರಾಪಂ ಅಧ್ಯಕ್ಷ ಖಲಿಮುಲ್ಲಾ, ಪ್ರಮುಖರಾದ ಶಾಂತಕುಮಾರ ಗೌಡ ಆಚಾಪುರ, ಸುದರ್ಶನ, ಮಂಜಪ್ಪ, ಉಮೇಶ, ಶಂಕರ್, ಕೆಪಿಎಸ್‌ನ ಪ್ರಾಚಾರ್ಯ, ಉಪ ಪ್ರಾಚಾರ್ಯರು, ಶಿಕ್ಷಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net