ಅರಕಲಗೂಡು: ತಾಲೂಕು ಕನಕ ನೌಕರರ ಸಂಘವು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಪರಿಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ, ಇಂಜಿನಿಯರಿಂಗ್ ಪದವಿ ಪಡೆದ, ಕಾನೂನು ಹಾಗೂ ಮೆಡಿಕಲ್ ಶಿಕ್ಷಣಕ್ಕೆ ಪ್ರವೇಶ ಪಡೆದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಅ.20ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಜಿ.ಮೊಗಣ್ಣ ತಿಳಿಸಿದರು.
ತಾಲೂಕಿನ ರಾಮನಾಥಪುರದ ಕನಕ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕುರುಬ ಸಮಾಜದ ನಿವೃತ್ತ ಸರ್ಕಾರಿ ನೌಕರರು ಹಾಗೂ ಅಂತಾರಾಷ್ಟ್ರೀಯ ಥ್ರೋಬಾಲ್ ಕ್ರಿಡಾಪಟು ಕೂಡ್ಲೂರು ಉಷಾ ಅವರನ್ನು ಸನ್ಮಾನಿಸಲಾಗುವುದು. ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಪ್ರಸಾದ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಪಶುವೈದ್ಯಾಧಿಕಾರಿ ಆಕಾಶ್ ಕಾರ್ಯಕ್ರಮದಲ್ಲಿ ಭಾಗವಹಿಸುವರು ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಭಾ ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳು ಪಟ್ಟಣದ ಕನಕ ಭವನದಲ್ಲಿರುವ ಸಂಕಲ್ಪ ಸ್ಟೋರ್ ಹಾಗೂ ರಾಮನಾಥಪುರದ ಲಕ್ಷ್ಮೀ ಮೆಡಿಕಲ್ಸ್‌ನಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಸಲ್ಲಿಸುವಂತೆ ತಿಳಿಸಿದರು. ಸಂಘದ ಖಜಾಂಚಿ ಕೆ.ಬಸವರಾಜ್, ನಿರ್ದೇಶಕರಾದ ಕೆ.ಎನ್.ಕೃಷ್ಣ, ಟಿ.ಜೆ.ಸಿದ್ದರಾಜು ಇದ್ದರು.