ದೀನ ವರ್ಗದ ಅಭಿವೃದ್ಧಿಗೆ ಶ್ರಮ : ಡಾ.ಹರಿಕೃಷ್ಣ ಪುನರೂರು ಹೇಳಿಕೆ

New Project (34)
Published on

ಮೂಲ್ಕಿ: ಸೇವಾ ಸಂಸ್ಥೆಗಳು ದೀನ ವರ್ಗದ ಜನರಿಗೆ ಸಹಾಯ ನೀಡುವುದರ ಜತೆಗೆ ಆರೋಗ್ಯ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಬೇಕು ಎಂದು ಲಯನ್ಸ್ ಮಾಜಿ ಗವರ್ನರ್ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು. ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರೊೃೀತ್ಸವ ಪ್ರಯುಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಮೂಲ್ಕಿ ಪರಿಸರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಯೋಧರಿಗೆ ಗೌರವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ.ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧ ಮೇಜರ್ ಡಾ.ರಾಘವೇಂದ್ರ ಹುಚ್ಚಣ್ಣವರ ಹಾಗೂ ನಾರಾಯಣ ರೈ ಕುಬೆವೂರ್ ಅವರನ್ನು ಗೌರವಿಸಲಾಯಿತು. ಮೂಲ್ಕಿ ಪರಿಸರದ 45 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಲಯನ್ಸ್ ಜಿಲ್ಲಾ ಸಂಪುಟದ ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ ರೈ, ಪ್ರಾಂತೀಯ ಅಧ್ಯಕ್ಷ ಮಾಧವ ಶೆಟ್ಟಿ, ವಲಯ ಅಧ್ಯಕ್ಷ ಪೌಲ್ ರೋಲ್ಪಿ ಡಿ ಕೋಸ್ಟಾ, ಲಿಯೋ ಅಧ್ಯಕ್ಷೆ ಲಿಯೋ ನಿಕಿತಾ ಅಂಚನ್, ಲಯನ್ ಸುಶೀಲ್ ಬಂಗೇರ, ಶೀತಲ್ ಸುಶೀಲ್ ಉಪಸ್ಥಿತರಿದ್ದರು.

ಹರ್ಷರಾಜ ಶೆಟ್ಟಿ ಜಿ.ಎಂ.ಸ್ವಾಗತಿಸಿದರು. ಶೀತಲ್ ಸುಶೀಲ್ ವಂದಿಸಿ, ಉದಯ ಅಮೀನ್ ಮಟ್ಟು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net