ಪ್ರತಿಭೆಯಿದ್ದರೆ ಅವಕಾಶ ಧಾರಾಳ : ಪ್ರದೀಪ್ ಡಿಸೋಜ ಅಭಿಪ್ರಾಯ

New Project (57)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪ್ರತಿಭೆ ಇದ್ದವರಿಗೆ ಸರ್ಕಾರಿ ಮಟ್ಟದಲ್ಲಿ ಸಾಕಷ್ಟು ಅವಕಾಶ ಇದ್ದು ಪ್ರಯತ್ನಿಸಿದರೆ ಸುಲಭವಾಗಿ ಕೆಲಸ ಪಡೆಯಲು ಸಾಧ್ಯ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಅಭಿಪ್ರಾಯಪಟ್ಟರು.

ಪಾನೀರ್ ಮೆರ್ಸಿಯಮ್ಮ ಇಗರ್ಜಿ ವತಿಯಿಂದ ಕೆಥೊಲಿಕ್ ಸಭಾ ಪಾನೀರ್ ಘಟಕದ ಆಶ್ರಯದಲ್ಲಿ ಭಾನುವಾರ ಚರ್ಚ್ ಸಭಾಂಗಣದಲ್ಲಿ ನಡೆದ ‘ಪ್ರತಿಭಾ ಪುರಸ್ಕಾರ-2025’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮುದಾಯದಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದರೂ ಸರ್ಕಾರಿ ಕೆಲಸ ಪಡೆಯುವಲ್ಲಿ, ಸರ್ಕಾರಿ ಕೆಲಸ ಮಾಡಿಸುವಲ್ಲಿ ತೀರ ಹಿಂದುಳಿದ ಕಾರಣ ಖಾಸಗಿ ಕಂಪನಿ ಅಥವಾ ವಿದೇಶದಲ್ಲಿ ಕೆಲಸ ಅವಲಂಭಿಸುವಂತಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೆಥೊಲಿಕ್ ಸಭಾ ಮಾಡಬೇಕು ಎಂದರು.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಉನ್ನತ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪಾನೀರ್ ಮೆರ್ಸಿಯಮ್ಮ ಇಗರ್ಜಿ ಧರ್ಮಗುರು ಫಾ.ವಿಕ್ಟರ್ ಡಿಮೆಲ್ಲೋ ಅಧ್ಯಕ್ಷತೆ ವಹಿಸಿದ್ದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ ಸರಿಟಾ ಡಿಸೋಜ, ಕಾರ್ಯದರ್ಶಿ ಗ್ರೆಟ್ಟಾ ಡಿಕುನ್ಹಾ, ದಯಾಮಾತೆ ಚರ್ಚ್ ಮಾಜಿ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಕಾರ್ಯಕ್ರಮ ಸಂಯೋಜಕ ಇಯಾನ್ ಮೊಂತೆರೋ ಮತ್ತಿತರರು ಉಪಸ್ಥಿತರಿದ್ದರು.

ಐವನ್ ಮೊಂತೆರೋ ಸ್ವಾಗತಿಸಿದರು. ರುವಿತಾ ಮೆನೇಜಸ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವೈಲೆಟ್ ಡಿಸೋಜ ವಂದಿಸಿದರು. ಅಶ್ವಿನ್ ಮೊಂತೆರೋ ಕಾರ್ಯಕ್ರಮ ನಿರೂಪಿಸಿದರು.

ಸಮುದಾಯದ ಯುವಕರು ಸೇವೆಯಲ್ಲಿ ಮುಂದಿದ್ದರೂ ನಮ್ಮ ಹಕ್ಕು ಪಡೆಯುವಲ್ಲಿ ಹಿಂದಿದ್ದೇವೆ, ಸರ್ಕಾರಿ ಕೆಲಸ ಪಡೆಯಲು ಕಷ್ಟಪಡಬೇಕು. ಆದರೆ ಒಂದು ಬಾರಿ ಪಡೆದರೆ ನಿವೃತ್ತಿ ಬಳಿಕವೂ ಪ್ರಯೋಜನ ಸಿಗುತ್ತದೆ. ನಿರಂತರ ಪ್ರಯತ್ನದಿಂದ ಜಯ ಖಚಿತ. ಫಾ.ವಿಕ್ಟರ್ ಡಿಮೆಲ್ಲೋ ಧರ್ಮಗುರು, ಪಾನೀರ್ ಮೆರ್ಸಿ ಅಮ್ಮನವರ ಇಗರ್ಜಿ https://www.vijayavani.net/inauguration-of-the-anganwadi-building-in-belaringe https://www.vijayavani.net/medical-camp-5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net