ಅ.5ರಂದು ಪ್ರತಿಭಾ ಪುರಸ್ಕಾರ

Untitled-1
ಹೊಸಕೋಟೆ ತಾಲೂಕಿನ ಶಿವನಾಪುರದ ಆದಿಶಕ್ತಿ ಮಹಾ ಸಂಸ್ಥಾನ ಹಾಗೂ ವಹ್ನಿಕುಲ ಕ್ಷತ್ರಿಯರ ಗುರುಪೀಠ ಅಭಿವೃದ್ಧಿ ಸಮಿತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಮಾತನಾಡಿದರು.
Published on

ನಂದಗುಡಿ : ಹೊಸಕೋಟೆ ತಾಲೂಕಿನ ಶಿವನಾಪುರದ ಶ್ರೀ ಆದಿಶಕ್ತಿ ಮಹಾಪೀಠದ ಆವರಣದಲ್ಲಿ ವಹ್ನಿಕುಲ ಕ್ಷತ್ರಿಯ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ದ್ರೌಪದಿದೇವಿ ವರ್ಧಂತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿವನಾಪುರ ಆದಿಶಕ್ತಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ತಿಳಿಸಿದರು.

ಹೊಸಕೋಟೆ ತಾಲೂಕಿನ ಶಿವನಾಪುರದ ಆದಿಶಕ್ತಿ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ದ್ರೌಪದಿ ದೇವಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿದ್ದು, ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಜತೆಗೆ ದ್ರೌಪದಿದೇವಿ ವರ್ಧಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು. ವಹ್ನಿಕುಲ ಕ್ಷತ್ರಿಯರ ಗುರುಪೀಠ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಪ್ರತಿಭಾ ಪುರಸ್ಕಾರ ಹಾಗೂ ದ್ರೌಪದಿ ಜಯಂತಿಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಶರತ್​ ಬಚ್ಚೇಗೌಡ, ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ ಆಗಮಿಸಲಿದ್ದಾರೆ ಎಂದರು. ಸಮಿತಿ ಉಪಾಧ್ಯಕ್ಷರಾದ ಸೋಮನಾಥ್​, ನಾಗರಾಜ್​, ಪ್ರಧಾನ ಕಾರ್ಯದರ್ಶಿ ಲಕ್ಷ$್ಮಣ್​, ನಾರಾಯಣಸ್ವಾಮಿ, ಮುಖಂಡರಾದ ಮಂಜುನಾಥ್​, ಕೋಲಾರ ಪಲ್ಗುಣ, ವೇಮಗಲ್​ ಮುನಿಯಪ್ಪ, ನಾರಾಯಣ್​ ಇದ್ದರು.

ಅಂತಿಮ ನಿರ್ಧಾರಕ್ಕೆ ಸಮಿತಿ ರಚನೆ : ರಾಜ್ಯಾದ್ಯಂತ ಸೆ.22ರಿಂದ ನಡೆಯಲಿರುವ ಶೈಕ್ಷಣಿಕ, ಸಾಮಾಜಿಕ ಜಾತಿಜನಗಣತಿ ಹಿನ್ನೆಲೆಯಲ್ಲಿ ಸಮುದಾಯ ಯಾವ ಜಾತಿ ನಮೂದು ಮಾಡಬೇಕು ಎನ್ನುವುದನ್ನು ಇನ್ನೂ ಅಂತಿಮ ಮಾಡಿಲ್ಲ. ಶ್ರೀ ಪ್ರಣಾವಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ 11 ಜನರ ಸಮಿತಿ ರಚನೆ ಮಾಡಿದ್ದು, ಅಂತಿಮ ನಿರ್ಧಾರ ಮಾಡಿ ತಿಳಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net